ಕೊಪ್ಪಳದಲ್ಲಿ ಮಕ್ಕಳ ರಕ್ಷಣೆ ಭಾಗೀದಾರ ಇಲಾಖೆ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಮಿಷಿನ್​ ವಾತ್ಸಲ್ಯ ಕುರಿತ ತರಬೇತಿ ಕಾರ್ಯಾಗಾರವನ್ನು ಡಿಸಿ ನಲಿನ್​ ಅತುಲ್​ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪುಜಾರ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯೆ ನಿಲೋರ್​ ರಾಂಪುರಿ, ನಿರೂಪಣಾಧಿಕಾರಿ ಗಂಗಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ರಾವೇಂದ್ರ ಭಟ್​, ಹರೀಶ ಜೋಗಿ ಇತರರಿದ್ದರು.  
ಜಿಲ್ಲೆ

ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಿ, ಡಿಸಿ ನಲಿನ್​ ಅತುಲ್​ ಸಲಹೆ

Kopala - Raveendra V K

ಕೊಪ್ಪಳ: ಕೇವಲ ಕಟ್ಟಡ, ರಸ್ತೆ, ಚರಂಡಿ, ಶೌಚಗೃಹ ಕಟ್ಟುವುದು ಮಾತ್ರವಲ್ಲದೆ, ಮಕ್ಕಳಿಗೆ ಸುರಕ್ಷಿತ ವಾತಾವರಣ ನಿಮಾರ್ಣ ನಮ್ಮೆಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಹೇಳಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಮಕ್ಕಳ ರಕ್ಷಣೆ ಭಾಗೀದಾರ ಇಲಾಖೆ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಮಿಷಿನ್​ ವಾತ್ಸಲ್ಯ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ಥಳಿಯ ಸರ್ಕಾರಗಳು ಶೇ.5ರಷ್ಟು ಅನುದಾನ ಮಕ್ಕಳಿಗಾಗಿ ಮೀಸಲಿಡಿ. ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತಗೊಳಿಸಿ. ಕಾಯ್ದೆ ಬಗ್ಗೆ ಅರಿವು ಮೂಡಿಸಿ. ಎಲ್ಲ ಅಧಿಕಾರಿಗಳು ಸಹಕಾರ ನೀಡಿ. ಬಾಲ್ಯ ವಿವಾಹ ಯತ್ನ ನಡೆದಲ್ಲಿ ದೂರು ದಾಖಲಿಸಿ. ಅನಾಥ, ಪರಿತ್ಯಕ್ತ, ಲೈಂಗಿಕ ಹಲ್ಲೆ, ದೌರ್ಜನ್ಯ, ಕಿರುಕುಳಕ್ಕೆ ಒಳಗಾದ ಮಕ್ಕಳ ರಕ್ಷಣೆಗೆ ಮಿಷಿನ್​ ವಾತ್ಸಲ್ಯ ಜಾರಿಯಲ್ಲಿದೆ. ಅಂಥ ಮಕ್ಕಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಗ್ರಾಮ, ವಾರ್ಡ್​, ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ನಿರ್ದೇಶಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪುಜಾರ ಮಾತನಾಡಿ, ಮಿಷಿನ್​ ವಾತ್ಸಲ್ಯ ಯೋಜನೆ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಪುನರ್ವಸತಿಗೆ ಜಾರಿಯಾಗಿದೆ. ಯಾವುದೇ ಮಗು ತನ್ನ ಹಕ್ಕಿನಿಂದ ವಂಚಿತವಾಗುವುದನ್ನು ತಡೆಯಬೇಕಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯೆ ನಿಲೋರ್​ ರಾಂಪುರಿ, ನಿರೂಪಣಾಧಿಕಾರಿ ಗಂಗಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ರಾವೇಂದ್ರ ಭಟ್​, ಹರೀಶ ಜೋಗಿ ಇತರರಿದ್ದರು.