ಮೋಹರಂ ಹಬ್ಬದ ನಿಮಿತ್ತ ಯುವಕರಿಗೆ ಹುಲಿ ಚಿತ್ರ ಬಿಡಿಸಿದ ಹನುಮಂತಪ್ಪ ಕಬ್ಬಾರ
ರಾಣೆಬೆನ್ನೂರ: ಮೋಹರಂ ಹಬ್ಬದ ನಿಮಿತ್ತ ರಾಣೆಬೆನ್ನೂರ ತಾಲೂಕಿನ ಮಣಕೂರ ಗ್ರಾಮದಲ್ಲಿ ಕಲಾವಿದ ಹನುಮಂತಪ್ಪ ಕಬ್ಬಾರ ಯುವಕರಿಗೆ ಹುಲಿಚಿತ್ರ ಬಿಡಿಸಿದರು. ಮಣಕೂರ ಗ್ರಾಮ ಮಾತ್ರವಲ್ಲದೆ ಮುದೇನೂರ, ಹೊಳೆಆನ್ವೇರಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಯುವಕರಿಗೆ ಹುಲಿಚಿತ್ರ ಬಿಡಿದರು.