ಜಿಲ್ಲೆ

ಯಾದಗಿರಿಯಲ್ಲಿ ಸಂಭ್ರಮ ಮೊಹರಂ ಆಚರಣೆ

ಬಾಬುರಾವ ಯಡ್ರಾಮಿ


ವಿಜಯವಾಣಿ ಸುದ್ದಿಜಾಲ ಯಾದಗಿರಿ
ಮೊಹರಂ ಹಬ್ಬದ ಕೊನೆಯ ದಿನ ನಿಮಿತ್ತ ಬುಧವಾರ ನಗರದ ಕೋಲಿವಾಡಾ ಏರಿಯಾದಲ್ಲಿ ಪ್ರತಿಷ್ಠಾಪಿಸಿರುವ ಇಮಾಜಿ ಖಾಸಿಮ್ ಸಾಬï ದೇವರ ಮೂರ್ತಿ ಅದ್ದೂರಿ ಮೆರವಣಿಗೆ ನಗರದ ವಿವಿಧಡೆ ಸಡಗರ, ಸಂಭ್ರಮದಿAದ ಜರುಗಿತು. ಮೂರ್ತಿಗೆ ಹೂಗಳಿಂದ ಸಿಂಗರಿಸಿ ಪೂಜೆ ಮಾಡಿದ ಅಪಾರ ಭಕ್ತರು ಮೆರವಣಿಗೆ ಮೂಲಕ ಕೋಲಿವಾಡಾ, ಮೈಲಾಪುರ ಅಗಸಿ, ಚಕ್ರಕಟ್ಟಾ, ಗಾಂಧಿ ವೃತ್ತದ ಮೂಲಕ ದೊಡ್ಡ ಕೆರೆಗೆ ಬಂದು ಅಲ್ಲಿ ದಫನ್ ಮಾಡಿದರು.
ಮಾರ್ಗದ ಉದ್ದಕ್ಕೂ ಅಪಾರ ಜನರು ಜೈಘೊಷಣೆ ಹಾಕುವ ಮೂಲಕ ಮೊಹರಂ ಹಬ್ಬಕ್ಕೆ ಕಳೆ ತಂದರು. ನಗರಸಭೆ ಮಾಜಿ ಉಪಾಧ್ಯಕ್ಷೆ, ಹಾಲಿ ಸದಸ್ಯೆ ಪ್ರಭಾವತಿ ಕಲಾಲï, ನಗರಸಭೆ ಸದಸ್ಯರಾದ ಚನ್ನಕೇಶವ ಗೌಡ ಹಾಗೂ ಮಾದೇವಮ್ಮ ಮಲ್ಲಯ್ಯ ಬೀರ್ ನೂರ್, ಯಂಕಪ್ಪ ಗೋಸಿ, ಮಲ್ಲಯ್ಯ, ಪೀರ್‌ಸಾಬ್, ಮಾಣಿಕ್ ಬಾಯï ದಸ್ತಗಿರ್ ದೊಡ್ಡಮನಿ, ಕಾಶೀಬಾಯಿ ದೊಡ್ಡಮನಿ, ದಸ್ತಾಗಿರ್ ದರ್ಜಿ, ಮಲ್ಲಯ್ಯ ಪೂಜಾ, ಮಾದೇವಪ್ಪ ಅಂಬಿಗೇರ, ಶಿವಪ್ಪ ಮಗ್ಗ ಮೈಲಾರಿ ಕುಣಿಸಿ, ಮಲ್ಲು ತಾತ ಅಂಬಿಗೇರ್, ಸಣ್ಣ ಮರಿಯಪ್ಪ ಭಜಂತ್ರಿ, ಈರಪ್ಪ ಕುಂಬಾರ್, ಅಂಬರೀಶ್ ಹುಬ್ಬಳ್ಳಿ, ಸಾಬಣ್ಣ ಬಾವುರ್, ಸಾಬಣ್ಣ ಓಸಿ, ಸಾಬಣ್ಣ ಮಾರುತಿ ಕಾಲಲï , ಮಹೇಶ್ ಕೋರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.