ಸಂಭ್ರಮದ ಮೊಹರಂಗೆ ತೆರೆ | ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರುಗಳ ಮೆರವಣಿಗೆ
ವಿಜಯವಾಣಿ ಸುದ್ದಿಜಾಲ ಕೊಡೇಕಲ್
ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಕೊಡೇಕಲ್, ರಾಜನಕೊಳೂರ ನಾರಾಯಣಪುರ, ಮದಲಿಂಗನಾಳ, ಯರಕಿಹಾಳ, ಬೂದಿಹಾಳ ಗ್ರಾಮ ಸೇರಿ ವಲಯದ ಎಲ್ಲ ಗ್ರಾಮಗಳಲ್ಲಿ ಸಂಭ್ರಮದಿAದ ಆಚರಿಸಲಾಯಿತು.
ಮೊಹರಂ ಆಚರಣೆಯಲ್ಲಿ ಹೆಜ್ಜೆ ಮೇಳ, ರಿವಾಯತ ಪದಗಳು ಮತ್ತು ಜನಪದ ಕಲೆಗಳು ಮೇಳೈಸುತ್ತವೆ ಅದರಂತೆ ಮೊಹರಂ ಕಡೆಯ ದಿನವಾದ ಬುಧವಾರ ಆಲಾಯಿ ದೇವರ ಕಟ್ಟೆಯ ಮುಂದೆ ದಿನವಿಡಿ ಹೆಜ್ಜೆ(ಆಲಾಯಿ) ಹಾಕುತ್ತಾ ಯುವಕರು ಸಂಭ್ರಮ ಪಟ್ಟರು.
ಗ್ರಾಮದ ಪ್ಯಾಟಿ ಪ್ರದೇಶದ ಆಲಾಯಿ ದೇವರ ಕಟ್ಟೆಯ ಸ್ಥಳದ ಎದುರು ಗ್ರಾಮದ ಯುವಕರು ಆಲಾಯಿ ಆಡುತ್ತಾ ಗಮನ ಸೆಳೆದರು. ವಿಶೇಷವಾಗಿ ಬಣ್ಣದ ಬಟ್ಟೆಗಳನ್ನು ಧರಿಸುವ ಮೂಲಕ ಕೈಯಲ್ಲಿ ಬಣ್ಣದ ಬಟ್ಟೆಗಳನ್ನು ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಿದರು.
ಬುಧವಾರ ಬೆಳಗಿನ ಜಾವ ದೀವಟಿಗೆ ಬೆಳಕಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರುಗಳ ಅದ್ದೂರಿ ಮೆರವಣಿಗೆ ಜರುಗಿತು. ಬುಧವಾರ ಸಂಜೆ ನಂತರ ಭಕ್ತರು ಆಲಾಯಿ ದೇವರಿಗೆ ಕರ್ಪೂರ ಉದುಬತ್ತಿ, ಸಕ್ಕರೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ಇದೇ ವೇಳೆ ಗ್ರಾಮದ ಹೊರವಲಯದಲ್ಲಿರುವ ಭೀಮರಾಯನ ಮುತ್ಯಾ ಕಟ್ಟೆಗೆ ತೆರಳಿದ ಭಕ್ತರು ದೇವರಿಗೆ ನೈವಿದ್ಯ ಅರ್ಪಿಸಿದರು. ಪೂಜಾರಿ ಬಸವರಾಜ ಜಿರಾಳ ಅವರು ಭಿಮರಾಯ ಮುತ್ಯಾ ಕಟ್ಟೆಗೆ ವಿಶೆಷ ಪೂಜೆ ಸಲ್ಲಿಸಿದರು.
ರಾಜಾ ಜೀತೇಂದ್ರನಾಯಕ ಜಹಗೀರದಾರ, ರಾಜಾ ಕುಶಾಲನಾಯಕ ಜಹಾಗೀರದಾರ, ಹಣಮಂತನಾಯಕ(ಬಬಲುಗೌಡ), ಮಲ್ಲು ನವಲಗುಡ್ಡ, ಹಣಮಂತ್ರಾಯ ಜಿರಾಳ, ಕನಕು ಜಿರಾಳ, ಬಸನಗೌಡ ಮಾಲಿಗೌಡ್ರ, ಅಂಬಣ್ಣ ದೋರಿ, ವಿರೇಶ ದೋರಿ, ವನಕೇರಪ್ಪ, ರಮೇಶ ಬಿರಾದಾರ ಇತರರಿದ್ದರು.
ವಡಗೇರಾ ವರದಿ: ತಾಲೂಕಿನಾದ್ಯಂತ ಮೊಹರಂ ಹಬ್ಬ ಬಹಳ ಸಡಗರ ಸಂಭ್ರಮದಿAದ ಶಾಂತಿಯುತವಾಗಿ ಆಚರಿಸಲಾಯಿತು. ಮಂಗಳವಾರದAದು ಖತಲ್ ರಾತ್ರಿಯಂದು ಪೀರಾಗಳ ಸವಾರಿಗಳ ಅದ್ದೂರಿ ಮೆರವಣಿಗೆ ನಡೆದವು. ಪೀರುಗಳ ಸವಾರಿಗಳು ವಿವಿಧ ಗ್ರಾಮಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ, ದರ್ಗಾಗಳಿಗೆ ಭೇಟಿ ಹೀಗೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಬುಧವಾರ ಸಂಜೆ ಮೊಹರಂ ಕೊನೇ ದಿನ ದಫನ್ ಕರ‍್ಯಕ್ರಮ ನಡೆಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಯಾದಗಿರಿ ಡಿಎಸ್‌ಪಿ ಅರುಣ ಮಾರ್ಗದರ್ಶನದಂತೆ ಸುನೀಲ್ ಮೂಲಿಮನಿ ನೇತೃತ್ವದಲ್ಲಿ ವಡಗೇರಾ ಪಿಎಸ್‌ಐ ಜಯಶ್ರೀ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಹಣಮಂತ ಮುಂಡರಗಿ ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.