ಕಡಬ: ಉದ್ದಿಮೆ, ವ್ಯಾಪಾರ, ವ್ಯವಹಾರಗಳ ಒತ್ತಡಗಳ ಮಧ್ಯೆ ತನ್ನನ್ನು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆಯೊಂದಿಗೆ ಸಹಕಾರ, ಪ್ರೋತ್ಸಾಹ ನೀಡುವುದೇ ಆದಲ್ಲಿ ಆತನನ್ನು ಅಲ್ಲಾಹು ಕೈಬಿಡಲಾರ ಎಂದು ಆತೂರು ಡಾ.ಶಾಹ್ ಉಸ್ತಾದ್ ಮೆಮೋರಿಯಲ್ ಬದ್ರಿಯಾ ಮಹಿಳಾ ಶರೀಅತ್, ಫಾಧೀಲ ಪದವಿ ಕಾಲೇಜಿನ ಪ್ರಾಚಾರ್ಯ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಹೇಳಿದರು.
ಮಂಗಳವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಮೊಹಬ್ಬತೆ ರಶೂಲ್ ಮಿಲಾದ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಹಂಝ ಸಖಾಫಿ ಮಾತನಾಡಿದರು. ಪ್ರಮುಖರಾದ ಆದಂ ಪಿಲಿಕೂಡೇಲು, ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಬಿ.ಕೆ.ಮಹಮ್ಮದ್ ಹಾಜಿ, ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹೈದರ್ ಕಲಾಯಿ, ಸಂಸ್ಥೆಯ ಸಂಚಾಲಕ ಅಬ್ದುಲ್ ಅಝೀಜ್, ಪದಾಧಿಕಾರಿಗಳಾದ ಪೊಡಿಕುಂಞ್ ನೀರಾಜೆ, ಬಿ.ಆರ್.ಅಬ್ದುಲ್ ಖಾದರ್, ಜಿ.ಎಂ.ಸಿರಾಜುದ್ದೀನ್, ಕೆ.ನಝೀರ್, ಇಬ್ರಾಹಿಂ ಮೋನು, ಉಮ್ಮರ್ ಹಾಜಿ ನೀರಾಜೆ, ಜಮಾಲು ಕಲಾಯಿ, ಕೆಮ್ಮಾರ ಶರೀಅತ್ ಕಾಲೇಜಿನ ಎನ್.ಎ.ಇಸಾಕ್, ಬಡಿಲ ಹುಸೇನ್, ಬದ್ರಿಯಾ ಜುಮಾ ಮಸೀದಿ ಕಾರ‌್ಯದರ್ಶಿ ಸಿರಾಜುದ್ದೀನ್, ಬಿ.ಕೆ.ಅಬ್ದುಲ್ ರಜಾಕ್, ಆತೂರು ಮದ್ರಸದ ಸದರ್ ಮುಅಲ್ಲಿಂ ಸತ್ತಾರ್ ಅಸ್ವವಿ, ಇಸ್ಮಾಯಿಲ್ ದಾರಿಮಿ, ಸ್ವಾಲಿ ಮುಸ್ಲಿಯಾರ್, ಅಬ್ದುಲ್ಲ ಮುಸ್ಲಿಯಾರ್, ಅಬೂಬಕ್ಕರ್ ಮುಸ್ಲಿಯಾರ್, ಹಾರಿಸ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.