ಯಲಬುರ್ಗಾದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದ ನೂತನ ರಥ ನಿರ್ಮಾಣದ ಕಟ್ಟಿಗೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಸಮಿತಿ ಅಧ್ಯಕ್ಷ ಅಮರಪ್ಪ ಕಲಬುರಗಿ, ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಬಸಲಿಂಗಪ್ಪ ಕೊತ್ತಲ್, ಮುಖಂಡರಾದ ಸುರೇಶಗೌಡ ಶಿವನಗೌಡ, ಬಸವರಾಜ ಅಧಿಕಾರಿ ಇದ್ದರು. 
ಜಿಲ್ಲೆ

ಶ್ರೀ ಮೊಗ್ಗಿ ಬಸವೇಶ್ವರ ನೂತನ ರಥ ನಿರ್ಮಾಣಕ್ಕೆ ಸಜ್ಜು

ಯಲಬುರ್ಗಾ: ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದ ನೂತನ ರಥ ನಿರ್ಮಾಣದ ಕಟ್ಟಿಗೆಗೆ ಪಟ್ಟಣದ ಉಭಯ ಶ್ರೀಗಳಾದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಸೋಮವಾರ ಪೂಜೆ ಸಲ್ಲಿಸಿದರು.

ಮೊಗ್ಗಿಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರಪ್ಪ ಕಲಬುರಗಿ ಮಾತನಾಡಿ, ಪಟ್ಟಣದ ಮೊಗ್ಗಿಬಸವೇಶ್ವರ ಜಾತ್ರೆಯ ತೇರು ಹಳೆಯದಾಗಿದ್ದು, ಹೊಸ ರಥ ನಿರ್ಮಾಣಕ್ಕೆ ದಾಂಡೇಲಿಯಿಂದ ಕಟ್ಟಿಗೆಗಳನ್ನು ತರಸಿ.

ಗಂಗಾವತಿಯಲ್ಲಿ ತೇರು ನಿರ್ಮಾಣಕ್ಕೆ ನೀಡಲಾಗುವುದು. ಇದಕ್ಕೆ ಒಂದು ವಷರ್ ಸಮಯ ಮೀಸಲಿಡಲಾಗಿದೆ. ಒಟ್ಟು 50 ರಿಂದ 60 ಲಕ್ಷ ರೂ.ವರೆಗೆ ನಿರ್ಮಾಣ ವೆಚ್ಚ ತಗುಲಲಿದೆ ಎಂದರು.

ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಬಸಲಿಂಗಪ್ಪ ಕೊತ್ತಲ್, ಮುಖಂಡರಾದ ಸುರೇಶಗೌಡ ಶಿವನಗೌಡ, ಬಸವರಾಜ ಅಧಿಕಾರಿ, ಬಸವರಾಜ ಗುಳಗುಳಿ, ಷಣ್ಮುಖಪ್ಪ ರಾಂಪುರ, ಶರಣಪ್ಪ ಓಜನಹಳ್ಳಿ, ದಾನನಗೌಡ ತೊಂಡಿಹಾಳ ಇದ್ದರು.