ಕೊಕ್ಕರ್ಣೆ: ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರೀ, ಶ್ರೀ ನಾಗಬ್ರಹ್ಮ, ಶ್ರೀ ಪರಿವಾರ ದೇವತಾ ಬೊಬ್ಬರ್ಯೆಶ್ವರ, ಶ್ರೀ ಕಪ್ಪಣ್ಣ ಸ್ವಾಮಿ, ಶ್ರೀ ಮಲಸಾವರಿ ಮತ್ತು ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ, ಗೆಂಡೋತ್ಸವ ಸಂಪನ್ನಗೊಂಡಿತು.
ಪಡು ದೇವಸ್ಥಾನ ನಾಗದೇವರಿಗೆ ಕಲಾಹೋಮ, ನವಕಲಶ ಸ್ಥಾಪನೆ, ಕಲಷಾಭಿಷೇಕ, ಮಹಾಮಂಗಳಾರತಿ, ಶ್ರೀ ದುರ್ಗಾಪರಮೇಶ್ವರಿ, ಕಪ್ಪಣ್ಣ ಸ್ವಾಮಿ ಸಾನ್ನಿಧ್ಯದಲ್ಲಿ ನವಕಲಶ ಸ್ಥಾಪನೆ, ಪರಿವಾರ ಬೊಬ್ಬರ್ಯೇಶ್ವರ ಸಾನ್ನಿಧ್ಯದಲ್ಲಿ ಪಂಚವಿಂಶತಿ ಕಲಶ ಸ್ಥಾಪನೆ, ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಮಂಗಳಾರತಿ, ಭಜನೆ, ರಾತ್ರಿ ಗೆಂಡೋತ್ಸವ, ಸುತ್ತು ಬಲಿ, ಡಾನ್ಸ್ ಧಮಾಕಾ ಕಾರ್ಯಕ್ರಮ, ನಾಗದೇವರಿಗೆ ಹಾಲಿಟ್ಟು ಸೇವೆ, ನಾಗದರ್ಶನ, ನಾಗಬ್ರಹ್ಮನ ಢಕ್ಕೆ ಬಲಿ, ನಾಗದೇವರ ತುಲಾಭಾರ ಸೇವೆ, ಶ್ರೀ ದುರ್ಗಾಪರಮೇಶ್ವರಿ ಸಾನ್ನಿಧ್ಯದಲ್ಲಿ ತುಲಾಭಾರ ಸೇವೆ, ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ಆವರ್ಸೆ ಅವರಿಂದ ದಕ್ಷಯಜ್ಞ ಯಕ್ಷಗಾನ, ರಂಗಪೂಜೆ, ಓಂಕಾರ ಕಲಾವಿದರಿಂದ ಆಪುದೆಲ್ಲಾ ಒಳ್ಳೆದಕ್ಕೆ ನಗೆನಾಟಕ, ನಾಗಬ್ರಹ್ಮನ ಹಾಲಿಟ್ಟು ಸೇವೆ, ನಾಗದೇವರ ತುಲಾಭಾರ, ಢಕ್ಕೆ ಬಲಿ, ನಾಗದರ್ಶನ, ಕಪ್ಪಣ್ಣ ದೇವರ ದರ್ಶನ, ಕಪ್ಪಣ್ಣ ಸ್ವಾಮಿ ತುಲಾಭಾರ ಸೇವೆ, ಮಾರಿಕಾಂಬ ಸಾನ್ನಿಧ್ಯದಲ್ಲಿ ದರ್ಶನ, ಮಲಸಾವರಿ ಭೋಗ, ಜೈನರ ಹಾಗುಳಿ, ಕೀಳು ದೈವ ದೇವರಿಗೆ ಭೋಗ, ಮಲಸಾವರಿ ದರ್ಶನ, ಪ್ರತಿನಿತ್ಯ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮ ಜರುಗಿತು. ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಆನಂದ ಮರಕಾಲ, ಸದಸ್ಯರು, ಜೀರ್ಣೋದ್ಧಾರ ಸಮಿತಿ, ಗುರಿಕಾರರು, ಪಾತ್ರಿಗಳು, ಅರ್ಚಕರು, ಊರ ಹತ್ತು ಸಮಸ್ತರು, ಭಕ್ತರು ಉಪಸ್ಥಿತರಿದ್ದರು.