ಜಿಲ್ಲೆ

ಬರವಣಿಗೆಯಿಂದಲೇ ಪ್ರಶ್ನಿಸಿದ ಮೊಗಳ್ಳಿ ಗಣೇಶ್

ಗಂಗಾಧರ ಬಿ ವಿ

*ನಮ್ಮವರು ತಂಡದಿಂದ ನುಡಿ-ನಮನ * ಒಡನಾಡಿಗಳಿಂದ ಸಂತಾಪ

ರಾಮನಗರ

ಸಾಹಿತಿ ಮೊಗಳ್ಳಿ ಗಣೇಶ್ ಅವರಿಗೆ ತವರು ಜಿಲ್ಲೆಯಲ್ಲಿ ಸಿಗಬೇಕಾದ ಪ್ರಾಶಸ್ತ್ಯ ಸಿಗಲಿಲ್ಲ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಮ್ಮವರು ತಂಡದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮೊಗಳ್ಳಿ ಗಣೇಶ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ವಾತನಾಡಿದ ಅವರು, ಹುಟ್ಟು ಕತೆಗಾರ ಮೊಗಳ್ಳಿ ಗಣೇಶ್ ಜಿಲ್ಲೆಯ ಮಗನಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಸೇರಿ ವಿವಿಧ ಸಂಘ-ಸಂಸ್ಥೆಗಳು ಅವರನ್ನು ಸಮ್ಮೇಳಾನಾಧ್ಯಕ್ಷರಾಗಿ ವಾಡಬಹುದಿತ್ತಾದರೂ ಮೊಗಳ್ಳಿಯವರು ಯಾರ ನೆನಪಿಗೂ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು.

ಸಂಘ-ಸಂಸ್ಥೆಗಳಾಗಲಿ, ಸಂಘಟಕರಾಗಲಿ ಸಾಹಿತಿಗಳನ್ನು ಜಾತಿಯಿಂದ ನೋಡದೆ ಅವರ ಸಾಹಿತ್ಯದ ಕೃಷಿ, ಹಿನ್ನೆಲೆಯಲ್ಲಿ ನೋಡಬೇಕು. ಮೊಗಳ್ಳಿ ಅವರು ಈ ಜಿಲ್ಲೆಯ ದಲಿತ ಕೇರಿಗಳ ಶೋಷಿತರ ನೋವು ಕಷ್ಟಗಳನ್ನು ಕತೆ, ಆತ್ಮಕತೆಗಳಲ್ಲಿ ಬರೆದು ಅನಾವರಣಗೊಳಿಸಿದ್ದಾರೆ. ಇಂತಹ ಸಾಹಿತಿಗೆ ಜಿಲ್ಲೆಯಲ್ಲಿ ಸೂಕ್ತ ಗೌರವ ಸಿಗಲಿಲ್ಲ ಎಂಬ ಭಾವನೆ ಈಗಲೂ ನಮ್ಮಂಥವರಿಗೆ ಕಾಡುತ್ತಿದೆ ಎಂದರು.

ಮೊಗಳ್ಳಿಯವರ ಹಠಾತ್ ನಿರ್ಗಮನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕುರಿತ ಕೃತಿ ಹೊರ ತರುವಷ್ಟರಲ್ಲಿ ಅವರು ನಿಧನರಾಗಿದ್ದು, ಬೇಸರ ತರಿಸಿದೆ. ಮೊಗಳ್ಳಿಯವರು ಪ್ರಶಸ್ತಿಗಳಿಗಾಗಿಯೋ, ಸನ್ಮಾನಗಳಿಗಾಗಿಯೋ ಬರೆಯಲಿಲ್ಲ. ಅವರು ಬರೆದ ಬರಹಗಳಿಗೆ ಬಹುವಾನಗಳು ಹುಡುಕಿಕೊಂಡು ಬರುತ್ತಿದ್ದವು ಎಂದು ಬಂಜಗೆರೆ ಜಯಪ್ರಕಾಶ ಸ್ಮರಿಸಿದರು.

ಯಾವುದಕ್ಕೂ ಕಟ್ಟುಬೀಳದ ಸಾಹಿತಿ

ವಿಮರ್ಶಕ ಡಾ.ನಟರಾಜ ಹುಳಿಯಾರ್ ವಾತನಾಡಿ, ಮೊಗಳ್ಳಿ ಗಣೇಶ್ ಯಾವುದಕ್ಕೂ ಕಟ್ಟುಬೀಳದ ಸಾಹಿತಿ ಎನ್ನುವುದು ಅವರ ಬರವಣಿಗೆ ಮೂಲಕವೇ ವೇದ್ಯವಾಗಿದೆ. ಕತೆಗಳ ಮೂಲಕ ಹಿಂಸೆಯ ವಿವಿಧ ರೂಪಗಳನ್ನು ಅನಾವರಣಗೊಳಿಸಿದ್ದಾರೆ. ಜಾತಿಪದ್ಧತಿಯಿಂದ ಅನೇಕ ಹಿಂಸೆಗಳು ಸೃಷ್ಟಿಯಾಗುತ್ತವೆ. ಕನ್ನಡ ವಿಮರ್ಶಕರ ವಲಯದಲ್ಲಿ ಮೊಗಳ್ಳಿಯವರನ್ನು ದಲಿತ ಸಾಹಿತಿ ಎಂದು ಗುರುತಿಸುವ ಮೂಲಕ ಅವರನ್ನು ತೆರೆಮರೆಗೆ ಸರಿಸಲಾಯಿತು. ಆದರೂ ಮೊಗಳ್ಳಿ ಅವರು ಗಂಭೀರ ಕತೆಗಳ ಮೂಲಕ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದ್ದಾರೆ. ಬರವಣಿಗೆ ಮೂಲಕ ಸವಾಜವನ್ನು ಪ್ರಶ್ನಿಸತೊಡಗಿದ್ದ ಗಣೇಶ್ ಅವರಿಂದ ವಿಶ್ವವಿದ್ಯಾಲಯಗಳ ಹಲವು ಸಾಹಿತಿಗಳಿಗೆ ಇರಿಸು-ಮುರಿಸು ಉಂಟಾಗುತ್ತಿತ್ತು. ಕೆಲವರಂತೂ ಮೊಗಳ್ಳಿ ಅವರ ಸಾಹಿತ್ಯದ ಬಗ್ಗೆ ಅವಜ್ಞೆ ಬರಿಸಲು ಪಯತ್ನಪಟ್ಟಿದ್ದರು ಎಂದು ನೆನಪಿಸಿಕೊಂಡರು.

ಸಮಾಜದ ತಲ್ಲಣಗಳ ಅನಾವರಣ

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯಯನ ಕೇಂದ್ರದ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ ವಾತನಾಡಿ, ಮೊಗಳ್ಳಿಯವರು ಕನ್ನಡ ಸಾಹಿತ್ಯವನ್ನು ಆದಿಗನ್ನಡ, ನಡುಗನ್ನಡ ಹಾಗೂ ಕೊನೆಗನ್ನಡ ಎಂದು ಮೂರು ಬಗೆಯಲ್ಲಿ ಗುರುತಿಸಿದ್ದರು. ಆದರೆ ಅವರ ಈ ಸಂಶೋಧನೆ ಅರ್ಧಕ್ಕೆ ನಿಂತಿದೆ. ಚರ್ಮವಾದ್ಯ ಹಾಗೂ ದೇಸಿ ಬೀಜಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಮೊಗಳ್ಳಿಯವರು ಅವುಗಳ ಸಂರಕ್ಷಣೆಗೆ ಆಸಕ್ತಿ ತೋರಿದ್ದರು. ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನೂ ರೂಪಿಸಿದ್ದರು. ಸವಾಜದಲ್ಲಿನ ತಲ್ಲಣಗಳನ್ನು ಸಾಹಿತ್ಯಕೃಷಿಯಲ್ಲಿ ಅನಾವರಣಗೊಳಿಸಿದ್ದಾರೆ. ಮೊಗಳ್ಳಿ ಅವರ ಸಾಹಿತ್ಯ ಕೃತಿಗಳ ಅಧ್ಯಯಯನವನ್ನು ಇಂದಿನ, ಮುಂದಿನ ತಲೆವಾರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.

ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿರುವ ಮೊಗಳ್ಳಿ ಗಣೇಶ್ ಅವರ ಬದುಕು-ಬರಹ ಕುರಿತು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಬೇಕು. ಅದಕ್ಕೆ ಸಂಪೂರ್ಣ ಸಹಕಾರ ನೀಡುವೆ. ಕೆ.ಶೇಷಾದ್ರಿ ನಗರಸಭೆ ಅಧ್ಯಕ್ಷ 

ಉಪನ್ಯಾಸಕ ಡಾ.ಡಿ.ಆರ್.ದೇವರಾಜ್, ಶಿಕ್ಷಕಿ ಎಚ್.ಕೆ.ಶೈಲಾಜ ಶ್ರೀನಿವಾಸ್ ಕವನ ವಾಚಿಸಿದರು. ಡಾ.ಮೊಗಳ್ಳಿ ಗಣೇಶ್ ಅವರ ಒಡನಾಡಿಗಳಾದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ, ಸಾಹಿತಿ ಡಾ.ಕುರುವ ಬಸವರಾಜ್, ದಲಿತ ಮುಖಂಡ ಶಿವಶಂಕರ್, ರೈತ ಹೋರಾಟಗಾರ ಸಿ.ಪುಟ್ಟಸ್ವಾಮಿ ಅವರು ಮೊಗಳ್ಳಿ ಗಣೇಶ್ ಕುರಿತು ವಾತನಾಡಿದರು.

ಸಂಘಟಕ ಕುಂಬಾಪುರ ಬಾಬು ಸ್ವಾಗತಿಸಿದರೆ ಸಹಪ್ರಾಧ್ಯಪಕ ಡಾ.ಎಚ್.ಡಿ.ಉವಾಶಂಕರ್ ಕಾರ್ಯಕ್ರಮ ನಿರೂಪಿಸಿದರು. ಮನೋ ಸಾಮಾಜಿಕ ಕಾರ್ಯಕರ್ತೆ ಎಸ್.ಪದ್ಮರೇಖಾ ವಂದಿಸಿದರು. ಗಾಯಕರಾದ ಬಿ.ಆರ್.ಶಿವಕುವಾರ್, ಚಲ್ಲಯ್ಯ ಕೋಡಂಬಳ್ಳಿ, ಹೊನ್ನಿಗಾನಹಳ್ಳಿ ಸಿದ್ದರಾಜಯ್ಯ, ಬೈರವ್, ಮಹೇಶ್ ಗೀತ ಗಾಯನ ನಡೆಸಿಕೊಟ್ಟರು.