ಜಿಲ್ಲೆ

ಗಣ್ಯರಿಗೆ ಭಗವದ್ಗೀತೆ ನೀಡುವ ಮೋದಿ ಕಾರ್ಯ ಶ್ಲಾನೀಯ

ತಾಳಿಕೋಟೆ: ಜಗತ್ತಿನ ಹಲವು ಗಣ್ಯರು ಭಾರತಕ್ಕೆ ಆಗಮಿಸಿದಾಗ ಅತಿಥಿ ಸತ್ಕಾರದ ಭಾಗವಾಗಿ ಭಗವದ್ಗೀತೆಯನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಗೀತೆಯ ಪ್ರಸಾರದಲ್ಲಿ ಆಸಕ್ತಿ ವಹಿಸುತ್ತಿರುವುದು ಪ್ರಶಂಸನೀಯ ಎಂದು ಜ್ಯೋತಿಷ್ಯ ಶಾಸ್ತ್ರ ಪರಿಣಿತ ವೇ. ವಸಂತ ಭಟ್ಟ ಜೋಶಿ ತಿಳಿಸಿದರು.

ಶ್ರೀ ಕೃಷ್ಣ ಮಂದಿರದಲ್ಲಿ ಬುಧವಾರ ಭಗವದ್ಗೀತಾ ಸೇವಾ ಸಮಿತಿ ಆಯೋಜಿಸಿದ್ದ 53ನೇ ವರ್ಷದ ಗೀತಾ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೇದ ಉಪನಿಷತ್ತು ಎಂಬುದು ಮತಭೇದವಿಲ್ಲದೆ ಅಭ್ಯಾಸಿಸಬಹುದಾಗಿದೆ ಎಂದರು.

ನಮ್ಮನ್ನು ಒಡೆದು ಆಳುವ ಮೂಲಕ ಪರಕೀಯರು ನಮ್ಮ ಸಂಸತಿಯನ್ನು ಹಾಳು ಮಾಡಿದ್ದಾರೆ. ಆದ್ದರಿಂದ ಇಲ್ಲಿಯವರೆಗೂ ನಮ್ಮಲ್ಲಿ ಏಕತೆ ಸಾಧ್ಯವಾಗುತ್ತಿಲ್ಲ ಎಂದರು.

ಭಗವದ್ಗೀತಾ ಸೇವಾ ಸಮಿತಿಯ ಶಾಂತಾಬಾಯಿ ನೂಲಿಕರ ಅವರು ಮಾತನಾಡಿ, ಎಲ್ಲರಲ್ಲೂ ಭಕ್ತಿ ಇರಬೇಕು. ಭಕ್ತಿಯಿಂದ ಮಾತ್ರ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.

ವೇ.ವೆಂಕಟೇಶ ಗ್ರಾಮಪುರೊಹಿತ, ಶ್ರೀಧರ ಗಾಮಪುರೊಹಿತ, ಮಲ್ಲಯ್ಯ ಗೊಟಗುಣಕಿ, ಗುರು ಕುಲಕರ್ಣಿ, ಎಸ್​.ಎಂ.ಪಾಲ್ಕಿ, ನಶಾಮ ಚವ್ಹಾಣ, ರವಿ ಕುಲಕರ್ಣಿ, ಮಾಣಿಕರಾವ್​ ಕುಲಕರ್ಣಿ, ಲಕ್ಷಿ$್ಮಬಾಯಿ ದೇಶಪಾಂಡೆ, ನಿರ್ಮಲಾ ಕುಲಕರ್ಣಿ, ನಳನಿ ಯಾದವಾಡ, ಶಶಿಕಲಾ ಕುಲಕರ್ಣಿ, ರೇಖಾ ನಾಡಿಗೇರ, ಸೀಮಾ ಚವ್ಹಾಣ, ಜಯಶ್ರೀ ಘಾವಡೆ, ಸಂಜೀನ ಗ್ರಮಪುರೊಹಿತ, ನಿಂಗಣ್ಣ ಬ್ಯಾಕೋಡ, ಭೀಮರಾವ್​ ಕುಲಕರ್ಣಿ, ನಿಂಗೋಜಿ ಕುಲಕರ್ಣಿ ಮತ್ತಿತರರಿದ್ದರು.

ಗ್ರಂಥ ವ್ಯಾಸಪೂಜೆಯನ್ನು ಡಾ.ಬಿ.ಎಸ್​. ಯಾದವಾಡ ದಂಪತಿ ನೆರವೇರಿಸಿದರು. ಶೋಭಾ ಸುಭೇದಾರ ಪ್ರಾರ್ಥಿಸಿದರು. ಗುಂಡು ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈರಣ್ಣ ಕಲ್ಬುರ್ಗಿ ನಿರ್ವಹಿಸಿದರು.