ಸಿಂಧನೂರು ನಮ್ಮ ದೇಶ ಜ್ಯಾತ್ಯಾತೀತ ದೇಶವಾಗಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದಾರೆ ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಮಾಡಿದ ದಾಳಿಗೆ ಪ್ರಧಾನಿ ಅವರು ಅಪರೇಷನ್ ಸಿಂಧೂರ ಹೆಸರಿನಲ್ಲಿ ಸರಿಯಾದ ಉತ್ತರವನ್ನು ಕೊಟ್ಟಿದ್ದಾರೆ.
ಯಾವುದೇ ರಾಜ್ಯ ರಾಷ್ಟ್ರಗಳು, ಉಗ್ರಗಾಮಿಗಳನ್ನು ಬೆಳೆಸಿದ್ದೆ ಆದರೆ ಅಂತ ರಾಷ್ಟ್ರಗಳು ಎಷ್ಟೇ ದೊಡ್ಡದಾದರು ದಮನ ಮಾಡಲು ಸಿದ್ಧರಿದ್ದೇವೆಂದು ಉತ್ತರ ನೀಡಿದ್ದಾರೆ. ಈ ಅಪರೇಷನ್‌ಗೆ ದೇಶದ 140 ಕೋಟಿ ಜನ ಬೆಂಬಲ ಸೂಚಿಸಿದ್ದಾರೆ.
ಅಲ್ಲೋಬ್ಬ, ಇಲ್ಲೋಬ್ರು ಮಾತನಾಡುತ್ತಾರೆ ಆದರೆ ಅಂತವರ ರೆಕ್ಕೆ ಪುಕ್ಕ ಕೊಡುತ್ತಿರುವ ಚಿಂತನೆಗೆ ಮುಕ್ತಾಯ ಹಾಡುವ ಕಾಲ ಬಂದಿದ್ದು, ನರೇಂದ್ರ ಮೋದಿ ಅವರ ತೀರ್ಮಾನ ಇಡೀ ವಿಶ್ವ ಒಪ್ಪಿಕೊಂಡಿದೆ ಎಂದರು.