ಮುದಗಲ್: ಸಮೀಪದ ಗುಡಿಹಾಳ ಗ್ರಾಮದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಹಜರತ್ ಸೈಯದ್ ಷಾ ಮೋದಿನ್ ಪೀರಾ ಖಾದ್ರಿ ಉರುಸ್ ಮಂಗಳವಾರ ಶ್ರದ್ಧೆ-ಭಕ್ತಿಯಿಂದ ಜರುಗಿತು.
ಸಜ್ಜಾದೆ ನಶೀನ್ ಸೈಯದ್ ಮೆಹಬೂಬ್ ಖಾದ್ರಿ ಅವರ ನಿವಾಸದಿಂದ ಆರಂಭವಾದ ಗಂಧದ ಮೆರವಣೆಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಮೋದಿನ್ ಪೀರಾ ಖಾದ್ರಿ ರಹೇಮತ್‌ವುಲ್ಲಾ ಅಲೈ ಅವರ ದರ್ಗಾ ಷರೀಫ್ ತಲುಪಿತು.
ಬಳಿಕ ಗಂಧ ಅರ್ಪಣೆ, ಕುರಾನ್ ಪಠಣ ಮತ್ತು ವಿಶೇಷ ಫಾತೇಹಾ ಕಾರ್ಯಕ್ರಮ ನಡೆಯಿತು. ಭಕ್ತರು ದೀರ್ಘದಂಡ ನಮಸ್ಕಾರ, ಸಕ್ಕರೆ ಓದಿಸುವುದು, ದೇವರಿಗೆ ಹೂವಿನ ಚಾದರ ಸಮರ್ಪಿಸುವ ಮೂಲಕ ಹರಕೆ ತೀರಿಸಿದರು. ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಪುರಸಭೆ ಸದಸ್ಯ ಮೆಹಬೂಬ್ ಕಡ್ಡಿಪುಡಿ, ಇರ್ಫಾನ್ ಜಾಗೀರದಾರ್, ಅಲ್ಲಾಬಕ್ಷ್ಷಾ, ಇಕ್ಬಾಲ್ ಜಮೀನ್ದಾರ್, ಏಜಾಜ್ ಹುಸೇನ್, ಮೌಲಿ ಪಾಷಾ, ಜಮೀರ್ ಕಾಲಿಗಾರ್, ಜಮಾಲಿ ಸಾಬ್ ಇತರರಿದ್ದರು.