ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಿಂದುತ್ವದ ನೇತಾರ ನರೇಂದ್ರ ಮೋದಿ ಮೂರನೇ ಸಲ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ನಗರದಲ್ಲಿ ಹಿಂದು ಜಾಗೃತಿ ಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಭಾನುವಾರ ಸಂಭ್ರಮಾಚರಣೆ ನಡೆಸಿದರು. ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಹ್ಯಾಟ್ರಿಕ್ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ಕ್ಷೀರಾಭಿಷೇಕ ಮಾಡಿ ಜನರಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಕಾರ್ಯಕರ್ತರು ಸಹ ನಗರ ಸೇರಿ ಜಿಲ್ಲೆಯ ಹಲವೆಡೆ ಸಂಭ್ರಮಾಚರಣೆ ಮಾಡಿದರು. ದೇಶದ ಹಿಂದುಗಳ ರಕ್ಷಣೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಜನರ ಆಶಯಗಳನ್ನು ಈಡೇರಿಸುವಂಥ ಕೆಲಸ ಮಾಡಲಿದ್ದಾರೆ ಎಂದು ಜೈಘೋಷಗಳನ್ನು ಮೊಳಗಿಸಿದರು.
ಸೇನೆ ಅಧ್ಯಕ್ಷ ಲಕ್ಷಿö್ಮÃಕಾಂತ ಸ್ವಾದಿ, ಪ್ರಮುಖರಾದ ರಾಜು ಕಮಲಾಪುರೆ. ಸಿದ್ದು ಕಂದಗಲ್, ದಶರಥ ಇಂಗೋಳೆ, ರಾಜು ಸ್ವಾಮಿ, ಚಿದಾನಂದ ಮಠಪತಿ, ಸಂಗು ಕಾಳನೂರ, ರಾಮಸೇವಕ ಶಿವು, ಆನಂದ ಶಿರ್ಕೆ, ವಿಕಾಸ ಸಾಗರ್, ಅರ್ಜುನ ಆಡೆ. ರಘು ಗುತ್ತೇದಾರ್ ಇತರರಿದ್ದರು.
ನರೇಂದ್ರ ಮೋದಿ ಮೂರನೇ ಸಲ ಪ್ರಧಾನಿಯಾಗಿದ್ದರಿಂದ ದೇಶದ ಜನರು ಸಂಭ್ರಮಿಸುತ್ತಿದ್ದಾರೆ. ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಭಾರತದ ಶಕ್ತಿ ಇಮ್ಮಡಿಸುವಂತೆ ಮಾಡಲಿದ್ದಾರೆ. ಹಿಂದುಗಳ ರಕ್ಷಣೆಗೆ ಹೊಸ ಕಾನೂನು ತರುವಂಥ ಕೆಲಸ ಮಾಡಬೇಕು.
| ಬಿ.ರೇಣುಕಾಚಾರ್ಯ ಸಲಗರ
ಬಿಜೆಪಿ ಮುಖಂಡ