ಜಿಲ್ಲೆ

ಪ್ರಧಾನಿ ಮೋದಿ ಮಂಗಳೂರು ರೋಡ್ ಶೋ ಸಮಯ ಬದಲಾವಣೆ

Mangaluru - Prakash MC Manjeshwar

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 14 ರಂದು ಮಂಗಳೂರು ನಗರದಲ್ಲಿ ನಡೆಸಲಿರುವ ರೋಡ್ ಶೋ ಸಮಯ ಬದಲಾವಣೆಯಾಗಿದೆ.

ಪರಿಷ್ಕೃತ ವೇಳಾಪಟ್ಟಿ ಯಂತೆ ರಾತ್ರಿ 7.45ಕ್ಕೆ ಲೇಡಿಹಿಲ್ ನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ನಿಂದ ರೋಡ್ ಶೋ ಆರಂಭವಾಗಲಿದೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಸುನಿಲ್ ಕುಮಾರ್ ಶನಿವಾರ ನಗರದಲ್ಲಿ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.

ಸಂಜೆ 7.45 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ರೋಡ್ ಶೋ ಆರಂಭವಾಗಿ ನವಭಾರತ್ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ. ವಿಜಯ ಸಂಕಲ್ಪ ರೋಡ್ ಶೋನಲ್ಲಿ ಭಾಗವಹಿಸಲು ಅಪೇಕ್ಷಿಸುವವರು ಸಂಜೆ 6.45 ರಿಂದ 7 ಗಂಟೆ ಒಳಗೆ ಸ್ಥಳದಲ್ಲಿ ಹಾಜರಿರುವಂತೆ ಅವರು ತಿಳಿಸಿದ್ದಾರೆ.

ಈ ಹಿಂದೆ ಮೋದಿಯವರು ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಸಮಾವೇಶದ ಆಯೋಜನೆ ಆಗಿತ್ತು. ಸಮಾವೇಶಕ್ಕೆ ಚಪ್ಪರ ಮುಹೂರ್ತವೂ ಆಗಿತ್ತು. ಆದರೆ ಏಕಾಏಕಿ ಸಮಾವೇಶ ರದ್ದುಗೊಂಡು ರೋಡ್ ಶೋ ಆಯೋಜನೆಗೊಂಡಿದೆ. ಆದರೆ ಈ ಹಿಂದೆ 6ಗಂಟೆಗೆ ರೋಡ್ ಶೋ ನಿಗದಿಯಾಗಿತ್ತು. ಸದ್ಯ ಸಮಯ ಬದಲಾವಣೆಗೊಂಡು 7.45ಕ್ಕೆ ರೋಡ್ ಶೋ ಆರಂಭವಾಗಲಿದೆ.

ಬೈಟ್: ಸುನಿಲ್ ಕುಮಾರ್ - ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ