ಜಿಲ್ಲೆ

ಅದಾನಿ, ಅಂಬಾನಿ ಆಸ್ತಿ ಹೆಚ್ಚಳದ ಹಿಂದಿನ ಕೈ ಮೋದಿ

ರಾಚಯ್ಯ ಸ್ವಾಮಿ

ರಾಯಚೂರು: ಪ್ರಧಾನಿ ಮೋದಿ ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅದಾನಿ ಮತ್ತು ಅಂಬಾನಿಗಳ ಆಸ್ತಿ ಕಳೆದ 10 ವರ್ಷಗಳಲ್ಲಿ ಹತ್ತಾರು ಪಟ್ಟು ಹೆಚ್ಚಳವಾಗುವುದರ ಹಿಂದೆ ಪ್ರಧಾನಿ ಮೋದಿಯ ಬೆಂಬಲವಿದೆ ಎಂದು ಮಾಜಿ ಸಭಾಪತಿ ಹಾಗೂ ಕೆಪಿಸಿಸಿ ಮುಖ್ಯ ವಕ್ತಾರ ವಿ.ಆರ್.ಸುದರ್ಶನ ಹೇಳಿದರು.
ಸ್ಥಳೀಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಆಡಳಿತ ವೈಲ್ಯ ಮುಚ್ಚಿಕೊಳ್ಳಲು ಬೇರೆ ಉದ್ರೇಕಗೊಳಿಸುವ ವಿಷಯಗಳನ್ನು ಮಾತನಾಡುವ ಮೂಲಕ ಮೋದಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
2014ರಲ್ಲಿ ಅಂಬಾನಿಯ ಆಸ್ತಿ 2,360 ಕೋಟಿ ಡಾಲರ್‌ಗಳಾಗಿತ್ತು. ಅದು 2014ರಲ್ಲಿ 11,690 ಕೋಟಿ ಡಾಲರ್‌ಗೆ ಹೆಚ್ಚಳವಾಗಿದೆ. ಅದಾನಿಯ ಆಸ್ತಿ 2014ರಲ್ಲಿ 800 ಕೋಟಿ ರೂ. ಇದ್ದದ್ದು 2024ರಲ್ಲಿ 8,650 ಕೋಟಿ ರೂ.ಗೆ ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಬೆಂಬಲದಿಂದಲೇ ಅವರ ಆಸ್ತಿ ಹತ್ತಾರು ಪಟ್ಟು ಹೆಚ್ಚಳವಾಗಿದೆ.
ಚುನಾವಣೆ ಸಂದರ್ಭದಲ್ಲಿ ವಿರೋಗಳನ್ನು ಟೀಕೆ ಮಾಡುವುದು ಸಹಜ. ಆದರೆ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಸ್ಲಿಮರಿಗೆ ವರ್ಗಾವಣೆ ಮಾಡುವ ಮಾತನಾಡಿ ಸುಳ್ಳನ್ನು 100 ಬಾರಿ ಹೇಳಿ ಜನರಿಗೆ ಸತ್ಯ ಎಂದು ನಂಬಿಸಲು ಮುಂದಾಗಿದ್ದಾರೆ.
ಧರ್ಮದ ಆಧಾರದಲ್ಲಿ ದೇಶದಲ್ಲಿ ಮೀಸಲಾತಿಯಿಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಮೂರು ಸಮುದಾಯಗಳನ್ನು ಹೊರತುಪಡಿಸಿ ಎಲ್ಲರೂ ಹಿಂದುಳಿದ ವರ್ಗಗಳಲ್ಲಿ ಬರುತ್ತಾರೆ. ಆದರೆ ಮೋದಿ ಮಾಹಿತಿಯಿಲ್ಲದೆ ಮಾತನಾಡುತ್ತಿದ್ದಾರೆ ಎಂದು ವಿ.ಆರ್.ಸುದರ್ಶನ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವೆಂಕಟರಾಮಯ್ಯ, ಪಕ್ಷದ ಮುಖಂಡರಾದ ಪಾರಸಮಲ್ ಸುಖಾಣಿ, ಜಿ.ಬಸವರಾಜ ರೆಡ್ಡಿ, ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ, ಡಾ.ರಜಾಕ್ ಉಸ್ತಾದ್, ಅಸ್ಲಂ ಪಾಷಾ, ಅಮರೇಗೌಡ ಹಂಚಿನಾಳ ಉಪಸ್ಥಿತರಿದ್ದರು.