ಜಿಲ್ಲೆ

ರೈತರ ಮೂಗಿಗೆ ಮೋದಿ ತುಪ್ಪ

Davangere - Desk - Mahesh Babu E

ಚಿತ್ರದುರ್ಗ: ಫಸಲ್ ಬಿಮಾ ಯೋಜನೆ ಹೆಸರಲ್ಲಿ ರೈತರ ತುಟಿಗೆ ತುಪ್ಪ ಹಚ್ಚಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಪರೋಕ್ಷವಾಗಿ ಟೀಕಿಸಿದರು.

ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದರು.

ಬೆಳೆಗೆ ಬೆಂಬಲ ಬೆಲೆ ಸಿಗಬೇಕಿದೆ. ಬೆಳೆ ನಷ್ಟ ಪರಿಹಾರ, ಗುಣಮಟ್ಟದ ವಿದ್ಯುತ್, ನೀರು ಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.