ಜಿಲ್ಲೆ

ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಹೊಂದಲಿದೆ: ರಾಘವೇಂದ್ರ ಯಳವತ್ತಿ

Gadag - Shivanand Hiremath

ಗದಗ: ಮಾಜಿ ಪ್ರಧಾನಿ ಜವಾಹರಲಾಲ್ ನೇಹರು ಬಳಿಕ ಸತತ ಮೂರನೇ ಬಾರಿ ವಿಶ್ವಗುರು ನರೇಂದ್ರ ಮೋದಿಜೀ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ನಾಯಕತ್ವವನ್ನು ವಿಶ್ವವೇ ಒಪ್ಪಿಕೊಂಡಿದ್ದು, ಅವರ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಗದಗ-ಬೆಟಗೇರಿ ನಗರಸಭೆಯ ಮಾಜಿ ಸ್ಥಾಯಿ ಸಮೀತಿ ಅಧ್ಯಕ್ಷ ಹಾಗೂ ಹಾಲಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಅಭಿಪ್ರಾಯಪಟ್ಟರು.

ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ಸ್ವೀಕರಿಸಿದ ಹಿನ್ನಲೆಯಲ್ಲಿ ಬೆಟಗೇರಿಯ ಬಸ್ ನಿಲ್ದಾಣದ ಹತ್ತಿರ ವಾರ್ಡ್ ನಂ. 7 ಮತ್ತು ವಾರ್ಡ್ ನಂ 4ರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಸೋಲಿಸಲು ಇಂಡಿ ಮೈತ್ರಿಕೂಟ ರಚಿಸಲಾಯಿತು. ಆದರೆ, ದೇಶದ ಪ್ರಭುದ್ದ ಜನತೆ ಅದನ್ನು ತೀರಸ್ಕರಿಸಿದರು. ಮತ್ತೋಮ್ಮೆ ಕಾಂಗ್ರೇಸ್ ದೇಶಾಧ್ಯಂತ ನೆಲಕಚ್ಚಿದರೂ ಗೆದ್ದವರಂತೆ ಸಂಭ್ರಮಿಸಿದರು. ಕಳೆದ 10ವರ್ಷದಿಂದ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಅವರು ಅನರ್ಹವಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಸ್ವಲ್ಪ ಜೀವ ಬಂದಿದ್ದು, 10ವರ್ಷದ ಬಳಿಕ ವಿರೋಧ ಪಕ್ಷದ ಸ್ಥಾನ ಪಡೆದಿದ್ದಾರೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದು ಸರ್ಕಾರಕ್ಕೆ ಒಳ್ಳೆಯ ಸಲಹೆ-ಸೂಚನೆ ನೀಡಿ, ಅಭಿವೃದ್ಧಿಪರ ಕಾರ್ಯಗಳಿಗೆ ಸರ್ಕಾರದ ಜೊತೆ ಸಹಕರಿಸಲಿ ಎಂದು ಕಿವಿಮಾತು ಹೇಳಿದರು.

ಈ ವೇಳೆ ಸಾಂದರ್ಭಿಕವಾಗಿ ಮಾತನಾಡಿದ ಯಲ್ಲಪ್ಪ ಕಾಂಬ್ಳೇಕರ ಅವರು, ದೇಶದ ಜನತೆ ಎನ್ ಡಿ ಎ ಮೈತ್ರಿಕೂಟಕ್ಕೆ ಬೆಂಬಲ ನೀಡುವುದರ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಅವಕಾಶವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸದುಪಯೋಗಪಡಿಸಿಕೊಂಡು ಜನಪರ ಆಡಳಿತ ನೀಡುತ್ತದೆ. ನರೇಂದ್ರ ಮೋದಿ ಕಳೆದ ಹತ್ತು ವರ್ಷದಿಂದ ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಮುಂದೆಯೂ ಉತ್ತಮ ಆಡಳಿತವನ್ನು ದೇಶದ ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಮಾತನಾಡಿದರು. 

ಇದೇ ವೇಳೆ ನಗರ SC ಮೋರ್ಚಾ ಅಧ್ಯಕ್ಷರಾದ ಮಂಜುನಾಥ ತಳವಾರ ಹಾಗೂ ನಗರ ಪ್ರಧಾನ ಕಾರ್ಯದರ್ಶಿ ಯಾದ ದೇವಪ್ಪ ಗೋಟರ್ 

ಮಾತನಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಆರ್ಥಿಕತೆಯಲ್ಲಿ ಈಗ ಐದನೇಯ ಸ್ಥಾನದಲ್ಲಿದ್ದು ಮುಂದಿನ ದಿನಮಾನಗಳಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಅವರು ನರೇಂದ್ರ ಮೋದಿಜೀಯ ಸಾಧನೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಈ ಸಂಭ್ರಮಾಚರಣೆಯಲ್ಲಿ ಬಿಜೆಪಿ ಮುಖಂಡರಾದ ಚಿನ್ನಪ್ಪ ನೆಗಳೂರ, ರಾಜು ಕೋಚಿ, ಲಕ್ಷ್ಮಣ ನೀಲಗುಂದ, ಪರಶುರಾಮ ಶ್ಯಾಮಿ, ಕೃಷ್ಣಾ ಲಕ್ಕುಂಡಿ, ಶಿವು ಪೂಜಾರ, ಮಾಯಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಗ್ಯಾನೋಬ ಪತಂಗಿ, ಪ್ರಭು ಶ್ಯಾಗಾವಿ, ರಾಜು ಲಕ್ಕುಂಡಿ, ಅಭಿಷೇಕ್ ಬಸವರಾಜ ಮಡಿವಾಳರ, ಕಾಬ್ಳೇಕರ, ಶಿವು ಗೋಟೂರ್, ಮೈಲಾರಿ ತುರಕಾಣಿ, ಈರಣ್ಣ ಬ್ಯಾಹಟ್ಟಿ, ಗೌರೀಶ ಬೇಲೇರಿ, ಮಲ್ಲಿಕಾರ್ಜುನ ಬೇಲೇರಿ, ಶ್ರೀಕಾಂತ್ ದೇಸಾಯಿ ಕೃಷ್ಣಾ ಚಿಂತಾ ಸೇರಿದಂತೆ ಅನೇಕ ಭಾರತೀಯ ಜನತಾ ಪಾರ್ಟಿಯ ಮುಖಂಡರು, ಕಾರ್ಯಕರ್ತರು ನರೇಂದ್ರ ಮೋದಿಜೀಯವರ ಅಭಿಮಾನಿಗಳು ಉಪಸ್ಥಿತರಿದ್ದರು.