ಜಿಲ್ಲೆ

ಕರಾವಳಿಗೆ ಕರೆ ಮಾಡಿ ಮಾರ್ಗದರ್ಶನ ಕೋರಿದ ಮೋದಿ

ಕರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಹಿರಿಯ ನಾಗರಿಕರ ನೆರವು, ಮಾರ್ಗದರ್ಶನ ಕೋರಿದ್ದಾರೆ. ಪ್ರಧಾನಿಯರವ ಕರೆ ಕರಾವಳಿಯ ಇಬ್ಬರು ಹಿರಿಯ ನಾಗರಿಕರಿಗೂ ಬಂದಿದೆ. ಪುತ್ತೂರಿನ ಹಿರಿಯ ನಾಗರಿಕ, ಬಿಜೆಪಿ ಮುಖಂಡ ಉರಿಮಜಲು ರಾಮ್ ಭಟ್ ಹಾಗೂ ಕಾಸರಗೋಡಿನ ಪೆರ್ಲದ ಹಿರಿಯ ಆರ್‌ಎಸ್‌ಸ್ ಕಾರ್ಯಕರ್ತ ಟಿ.ಆರ್.ಕೆ.ಭಟ್ ಅವರನ್ನು ಮೋದಿಯವರು ಸಂಪರ್ಕಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಆರ್‌ಎಸ್‌ಎಸ್-ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಟಿ.ಆರ್.ಕೆ.ಭಟ್ ಪ್ರಮುಖರು. ತುರ್ತು ಪರಿಸ್ಥಿತಿ ಸಂದರ್ಭ ಸೆರೆಮನೆ ವಾಸ ಅನುಭವಿಸಿದ್ದ ಭಟ್, ಹೋರಾಟದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡವರು. ಎಣ್ಮಕಜೆ ಗ್ರಾಮ ಪಂಚಾಯಿತಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷರಾಗಿ ನಾನಾ ಸಂಘಟನೆಗಳಲ್ಲಿ ಸಕ್ರಿಯರು. ವಯೋಸಹಜ ಅಸೌಖ್ಯ ಬಿಟ್ಟರೆ, ಉತ್ತಮ ಆರೋಗ್ಯ ಕಾಯ್ದುಕೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದ ಭಟ್

-ಟಿ.ಆರ್.ಕೆ.ಭಟ್, ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ

ಪ್ರಧಾನಿಯವರ ಕರೆ ಸ್ವೀಕರಿಸಿದ್ದು ರೋಮಾಂಚನದ ಕ್ಷಣ. ಜನಸಾಮಾನ್ಯರ ಬಗ್ಗೆ ಪ್ರಧಾನಿಗಿರುವ ಒಲವು ಈ ಮೂಲಕ ವ್ಯಕ್ತವಾಗಿದೆ. ಇದು ಎಂದಿಗೂ ಮರೆಯಲಾರದ ಅನುಭವ.

‘ನಿಮ್ಮಂಥ ಹಿರಿಯರು ಮಾಡಿದ ನಿಸ್ವಾರ್ಥ ಸೇವೆ, ದೇಶದಲ್ಲಿ ಇಂದು ಪ್ರಜ್ವಲಿಸುವಂತಾಗಿದೆ. ನಿಮ್ಮ ಕೆಲಸಗಳ ಬಗ್ಗೆ ಕೇಳಿ ತಿಳಿದುಕೊಳ್ಳುವ ಭಾಗ್ಯ ಸಿಕ್ಕಿದ್ದು ನನ್ನ ಪಾಲಿಗೆ ಸಂತೋಷ. ಮುಂದೆಯೂ ದೇಶಸೇವೆ ಮಾಡುವ ಆಯುಷ್ಯ, ಆರೋಗ್ಯ ದೇವರು ಕರುಣಿಸಲಿ ಎಂದು ಹಾರೈಸುತ್ತೇನೆ. ಕರೋನಾ ದಿನಗಳಲ್ಲಿ ಆರೋಗ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಎಂದು ಪ್ರಧಾನಿ ಸಲಹೆ ನೀಡಿದ್ದಾಗಿ ಭಟ್ ತಿಳಿಸಿದರು.

ಕಾಸರಗೋಡು: ಎರಡು ವಾರಗಳ ಹಿಂದೆ ಪ್ರಧಾನಿಯವರ ದೂರವಾಣಿ ಕರೆ ಬರುವ ಸೂಚನೆ ಲಭಿಸಿತ್ತು. ಗುರುವಾರ ಬೆಳಗ್ಗೆ 9.30ಕ್ಕೆ ಮೋದಿಯವರ ಕರೆ ಬಂತು. ಐದು ನಿಮಿಷ ನಮ್ಮಿಬ್ಬರ ಮಾತುಕತೆ ನಡೆದಿದೆ ಪ್ರಧಾನಿ ನನ್ನ ಆರೋಗ್ಯ ಮತ್ತು ವ್ಯವಹಾರಗಳ ಬಗ್ಗೆ ವಿಚಾರಿಸಿದರು ಎಂದು ಜಿಲ್ಲೆಯ ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತ, 93ರ ಹರೆಯದ ಬಿಜೆಪಿ ಮುಖಂಡ ತಡೆಗಲ್ಲು ರಾಮಕೃಷ್ಣ ಭಟ್(ಟಿ.ಆರ್.ಕೆ ಭಟ್ ಪೆರ್ಲ) ವಿವರಿಸಿದರು.

ಬೆಳಗ್ಗೆ 9.30ಕ್ಕೆ ಬಂತು ಪ್ರಧಾನಿ ಕರೆ

ಪುತ್ತೂರಿನಲ್ಲಿ ನೆಲೆಸಿರುವ ರಾಮ್ ಭಟ್ ಆರ್‌ಎಸ್‌ಎಸ್‌ನ ಹಿರಿಯ ಮುಖಂಡರು. 1978, 1983ರಲ್ಲಿ ಪುತ್ತೂರಿನ ಶಾಸಕರಾಗಿದ್ದರು. 1973ರಲ್ಲಿ ರಾಮ್ ಭಟ್ ನೇತೃತ್ವದಲ್ಲಿ ಪುತ್ತೂರು ಪುರಸಭೆಯಲ್ಲಿ ಜನಸಂಘ ಅಧಿಕಾರಕ್ಕೇರಿತ್ತು. 1975ರಲ್ಲಿ ತುರ್ತು ಪರಿಸ್ಥಿತಿಯಿಂದಾಗಿ ರಾಮ್‌ಭಟ್ ಜೈಲು ಸೇರಿದ್ದರು. ಇವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರ ನಿಕಟವರ್ತಿಯೂ ಹೌದು.

ಪುತ್ತೂರಿನಲ್ಲಿ ಶಾಸಕರಾಗಿದ್ದ ಭಟ್

- ಉರಿಮಜಲು ರಾಮ್ ಭಟ್, ಮಾಜಿ ಶಾಸಕ

ನೀವು ಇರುವವರೆಗೆ ಭಾರತ ಸುಭದ್ರ. ಜನರು ನಿಮ್ಮ ಮೇಲೆ ನಂಬಿಕೆಯ ಭಾರ ಹಾಕಿದ್ದಾರೆ. ಭಾರತೀಯರು ನಿರಂತರ ನಿಮ್ಮ ಜತೆ ಇರುತ್ತಾರೆ ಎಂದು ಪ್ರಧಾನಿ ಮೋದಿಯವರಿಗೆ ಹೇಳಿದ್ದೇನೆ.

ಏ.22ರಂದು ಪ್ರಧಾನಿ ಮೋದಿಯವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಕರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಆಶೀರ್ವಾದವನ್ನು ಕೋರಿದ್ದಾರೆ. ಮೂರು ನಿಮಿಷ ಕಾಲ ಮಾತುಕತೆ ನಡೆದಿದೆ ಎಂದರು.

- ಹೀಗೆಂದು ಪ್ರಧಾನಿ ದೂರವಾಣಿಯಲ್ಲಿ ಮಾತನಾಡಿದ್ದಾಗಿ ರಾಮ ಭಟ್ ವಿಜಯವಾಣಿಗೆ ತಿಳಿಸಿದರು.

ಹಿರಿಯ ಮುಖಂಡರಾದ ರಾಮ್ ಭಟ್ ಅವರೇ, ಹೇಗಿದ್ದೀರಿ? ನಿಮಗೆ ಜನಸೇವಕ ನರೇಂದ್ರ ಮೋದಿ ಮಾಡುವ ನಮಸ್ಕಾರಗಳು. ನಿಮ್ಮಂಥ ಅಸಂಖ್ಯಾತ ಹಿರಿಯರು, ಸಾಧು, ಸಂತರ ಆಶೀರ್ವಾದದಿಂದ ನಾನು ಹಾಗೂ ಭಾರತ ಕ್ಷೇಮವಾಗಿದೆ. ಕರೊನಾ ವೈರಸ್‌ನಿಂದ ಇಡೀ ವಿಶ್ವ ಭಯಗೊಂಡಿದ್ದು, ದೇಶವನ್ನು ಸಮರ್ಥವಾಗಿ ಮುನ್ನಡೆಸಿ, ಕರೊನಾ ವಿರುದ್ಧ ಸಮರ ಸಾರಲಾಗಿದೆ. ಇದಕ್ಕಾಗಿ ನಿಮ್ಮಂಥ ಹಿರಿಯರ ಆಶೀರ್ವಾದ ಅಗತ್ಯ.

ರಾಮ್ ಭಟ್ ಅವರೇ ಹೇಗಿದ್ದೀರಿ?