ಜಿಲ್ಲೆ

ರಾಮದಾಸ್ ಕಾರ್ಯಕ್ಕೆ ಮೋದಿ ಮೆಚ್ಚುಗೆ

Mysuru

ಮೈಸೂರು: ಶಾಸಕ ಎಸ್.ಎ. ರಾಮದಾಸ್ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿ. ಇತ್ತೀಚೆಗೆ ನಗರಕ್ಕೆ ಮೋದಿ ಭೇಟಿ ನೀಡಿದ ಸಂದರ್ಭ ರಾಮದಾಸ್ ಅವರ ಬೆನ್ನುತಟ್ಟಿ ಅವರ ಕೆಲಸ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಪ್ರೀತಿಗೋಸ್ಕರ ರಾಮದಾಸ್ ಪ್ರತಿವರ್ಷ ಮೋದಿ ಯುಗ ಉತ್ಸವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಕಂದಾಯ ಸಂಚಿವ ಆರ್. ಅಶೋಕ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ವಿದ್ಯಾರಣ್ಯಪುರಂನ ಶ್ರೀ ರಾಮಲಿಂಗೇಶ್ವರ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡ ‘ಮೋದಿ ಯುಗ ಉತ್ಸವ’ ಕಾರ್ಯಕ್ರಮದಲ್ಲಿ 232 ಫಲಾನುಭವಿಗಳಿಗೆ ಪಿಂಚಣಿ ವಿತರಿಸಿ ಮಾತನಾಡಿದರು.

ರಾಮದಾಸ್ ರೀತಿಯಲ್ಲಿ ಕೆಲಸ ಮಾಡಿದರೆ ಮತದಾರರು ನೆನೆಯುತ್ತಾರೆ. ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಜನರ ಮನೆ ಬಾಗಿಲಿಗೆ ಬರುತ್ತಾರೆ. ಆದರೆ, ಮೋದಿ ಯುಗ ಉತ್ಸವದ ಹೆಸರಿನಲ್ಲಿ ರಾಮದಾಸ್ 50 ಸಾವಿರ ಮನೆಗಳನ್ನು ಭೇಟಿ ಮಾಡಿ ಅವರಿಗೆ ಸರ್ಕಾರದ ಸವಲತ್ತು ಒದಗಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ. ರಾಮದಾಸ್ ರೀತಿಯಲ್ಲಿ ಕೆಲಸ ಮಾಡಿದರೆ ಸುಭಿಕ್ಷ ಕಾಲ ನಿರ್ಮಾಣ ಆಗುತ್ತದೆ. ರಾಮದಾಸ್ ಜನರ ಮನೆ, ಮನ ಮುಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸವನ್ನು ಎಲ್ಲ ಜನಪ್ರತಿನಿಧಿಗಳು ಮಾಡಬೇಕು ಎಂದರು.