Transparent umbrella under heavy rain against water drops splash background. Rainy weather concept. 
ಜಿಲ್ಲೆ

ಸೆ.2ರಿಂದ 6ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಸೆ.2ರಿಂದ 6ರವರೆಗೆ ತುಂತುರುವಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ಅವಧಿಯಲ್ಲಿ ಗರಿಷ್ಟ 32 ರಿಂದ 33 ಡಿಗ್ರಿ ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಇನ್ನು ಗಾಳಿಯು ಪ್ರತಿ ಗಂಟೆಗೆ 5 ರಿಂದ 7 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ.

23.7 ಮಿ.ಮೀ ಮಳೆ ದಾಖಲು: ಹಲವು ದಿನದ ಬಳಿಕ ಜಿಲ್ಲೆಯಲ್ಲಿ ಮಳೆಯ ದರ್ಶನವಾಗಿದೆ. ಅಂತೆಯೇ ಗುರುವಾರ ರಾತ್ರಿ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ 23.7 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ. ಮದ್ದೂರು ತಾಲೂಕಿನಲ್ಲಿ 42.4 ಮಿ.ಮೀ, ಮಂಡ್ಯದಲ್ಲಿ 38.8, ನಾಗಮಂಗಲದಲ್ಲಿ 33.6, ಮಳವಳ್ಳಿಯಲ್ಲಿ 22.2, ಪಾಂಡವಪುರದಲ್ಲಿ 8.9, ಶ್ರೀರಂಗಪಟ್ಟಣದಲ್ಲಿ 5.7 ಹಾಗೂ ಕೆ.ಆರ್.ಪೇಟೆ ತಾಲೂಕಿನಲ್ಲಿ 5.1 ಮಿ.ಮೀ ಮಳೆ ಸುರಿದಿದೆ.