ಮಡಿಕೇರಿ: ಜಿಲ್ಲೆಯಲ್ಲಿ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ.
ಮಡಿಕೇರಿ ತಾಲೂಕು ಸೇರಿದಂತೆ ಭಾಗಮಂಡಲ, ನಾಪೋಕ್ಲು, ಸೋಮವಾರಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರು ಸಂರ್ಪೂಣವಾಗಿ ಇಳಿಕೆಗೊಂಡಿದೆ.
೨೪ ಗಂಟೆಯಲ್ಲಿ ೩೫.೯೯ ಮಿ.ಮೀ. ಮಳೆ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೩೫.೯೯ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೫೬.೬೩ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨೭.೨೦ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೨೧.೫೮ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೫೧.೭೫ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨೨.೮೦ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩೯.೬೦, ನಾಪೋಕ್ಲು ೩೧.೪೦, ಸಂಪಾಜೆ ೯೮.೫೦, ಭಾಗಮಂಡಲ ೫೭, ವಿರಾಜಪೇಟೆ ೨೬.೪೦, ಅಮ್ಮತ್ತಿ ೨೮, ಹುದಿಕೇರಿ ೩೦.೯೦, ಶ್ರೀಮಂಗಲ ೨೭.೪೦, ಪೊನ್ನಂಪೇಟೆ ೧೨, ಬಾಳೆಲೆ ೧೬, ಸೋಮವಾರಪೇಟೆ ಕಸಬಾ ೪೪, ಶನಿವಾರಸಂತೆ ೫೩, ಶಾಂತಳ್ಳಿ ೭೦, ಕೊಡ್ಲಿಪೇಟೆ ೪೦, ಕುಶಾಲನಗರ ೧೫.೬೦, ಸುಂಟಿಕೊಪ್ಪ ೩೦ ಮಿ.ಮೀ.ಮಳೆಯಾಗಿದೆ.
ಟ್ರಾನ್ಸ್ ಫಾರ್ಮರ್ ದುರಸ್ಥಿ: ಬಲ್ಲಮಾವಟಿ ಗ್ರಾಮದ ಬಲ್ಲ ಊರಿನಲ್ಲಿ ವಿದ್ಯುತ್ ಇಲ್ಲದೆ ಸುಮಾರು ೨೦ ರಿಂದ ೨೨ ದಿನಗಳು ಕಳೆದಿತ್ತು. ಈ ಹಿನ್ನೆಲೆ ಗ್ರಾಮಸ್ಥರು ಸೇರಿ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗುತ್ತಿದ್ದ ಮರದ ರೆಂಬೆಗಳನ್ನು ಕಡಿದು ಲೈನ್ ಸ್ವಚ್ಛಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸೆಸ್ಕ್ ಸಿಬ್ಬಂದಿಗಳೊಂದಿಗೆ ಜತೆಗೂಡಿ ಗ್ರಾಮದಲ್ಲಿ ಹಾಳಾಗಿದ್ದ ಟ್ರಾನ್ಸ್ ಫಾರ್ಮರ್‌ನ್ನು ತೆಗೆದು ನೂತನ ಟ್ರಾನ್ಸ್ ಫಾರ್ಮರ್ ಅಳವಡಿಸಲಾಯಿತು.