ಹೊಳೆನರಸೀಪುರ: ಪಟ್ಟಣದಲ್ಲಿ ಗುರುವಾರ ಮಳೆರಾಯ ತಂಪೆರೆದ. ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ತಾಲೂಕಿನಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ಮೂಲಕ ಗತಕಾಲದ ಆಷಾಢ ಮಾಸದ ನೆನಪು ಮರುಕಳಿಸುವಂತೆ ಮಾಡಿತು.
ತಾಲೂಕಿನ ಹಳೇಕೋಟೆ ಕಸಬಾ ಹಾಗೂ ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದೆ. ಹಲವು ದಿನಗಳಿಂದ ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯ ಕೆಲ ಭಾಗಗಳಿಗೆ ಮಳೆ ಇಲ್ಲದೆ ಬೆಳೆ ಒಣಗುತ್ತಿದ್ದವು. ಕಸಬಾ ಹಾಗೂ ಹಳಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಸಾಧಾರಣವಾಗಿ ಮಳೆ ಬಿದ್ದಿದೆ.