ಜಿಲ್ಲೆ

ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಮಡಿಕೇರಿ: ಜಿಲ್ಲೆಯಲ್ಲಿ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ.


ಮಡಿಕೇರಿ ನಗರದ ಸುತ್ತಮುತ್ತ ಸೇರಿದಂತೆ ಸಂಪಾಜೆ, ಮದೆನಾಡು, ತಾಳತ್ತಮನೆ, ಬೋಯಿಕೇರಿ, ಉಡೋತ್‌ಮೊಟ್ಟೆ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾದರೆ, ಸುಂಟಿಕೊಪ್ಪ, ಗೋಣಿಕೊಪ್ಪ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ಸೋಮವಾರಪೇಟೆ, ಕುಶಾಲನಗರ ಮೋಡಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿದೆ.


ಕಳೆದ೨೪ ಗಂಟೆಯಲ್ಲಿ ೧೨.೧೫ ಮಿ.ಮೀ ಮಳೆ: ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೨.೧೫ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೪.೭೨ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೬ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೬.೩೦ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧೧.೩೫ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧೨.೪೦ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೪೧.೨, ನಾಪೋಕ್ಲು ೮.೨, ಸಂಪಾಜೆ ೨೮.೫, ಭಾಗಮಂಡಲ ೨೧, ವಿರಾಜಪೇಟೆ ೬, ಅಮ್ಮತ್ತಿ ೬, ಹುದಿಕೇರಿ ೩.೮, ಶ್ರೀಮಂಗಲ ೬.೪, ಪೊನ್ನಂಪೇಟೆ ೧೩, ಬಾಳೆಲೆ ೨, ಸೋಮವಾರಪೇಟೆ ಕಸಬಾ ೧೫, ಶನಿವಾರಸಂತೆ ೫, ಶಾಂತಳ್ಳಿ ೨೨, ಕೊಡ್ಲಿಪೇಟೆ ೩.೪, ಕುಶಾಲನಗರ ೩.೮, ಸುಂಟಿಕೊಪ್ಪ ೨೧ ಮಿ.ಮೀ.ಮಳೆಯಾಗಿದೆ.


ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೯ ಅಡಿಗಳಿದ್ದು, ಭಾನುವಾರ ೨೮೫೪.೭೭ ಅಡಿ ನೀರು ಸಂಗ್ರವಾಗಿದೆ. ಇಂದಿನ ನೀರಿನ ಒಳಹರಿವು ೭೭೫೬ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೬೦೦೦ ಕ್ಯುಸೆಕ್ ನೀರುಬಿಡಲಾಗುತ್ತಿದೆ.