ಸಿರವಾರ ತಾಲೂಕಿನ ಕಲ್ಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಸಂವಿದಾನ ಸಮರ್ಪಣೆ ದಿನ ಆಚರಣೆ ಮಾಡಲಾಯಿತು. 
ಜಿಲ್ಲೆ

ಇಡೀ ವಿಶ್ವಕ್ಕೆ ಮಾದರಿ

ರುದ್ರಪ್ಪ ವಾಲಿ

ಸಿರವಾರ: ತಾಲೂಕಿನ ಕಲ್ಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಸಂವಿಧಾನ ಸಮರ್ಪಣೆ ದಿನ ಆಚರಣೆ ಮಾಡಲಾಯಿತು.

ಮುಖ್ಯಶಿಕ್ಷಕ ನಾಗೇಶ ಗೌಡ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಬರೆದ ಭಾರತದ ಸಂವಿಧಾನವನ್ನು ನಮಗೆ ಅರ್ಪಣೆ ಮಾಡಿದ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನವು ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಶಿಕ್ಷಕರಾದ ದ್ರಾಕ್ಷಾಯಣಿ, ವಿಜಯಲಕ್ಷ್ಮೀ, ಶಿವಕುಮಾರ, ಅರುಣಾ ಬಾಯಿ, ಸುವರ್ಣ ಪಾಟೀಲ್, ಕಲ್ಪನಾ, ವಿಜಯಕುಮಾರ,ಸಂಗೀತಾ, ರೇಣುಕಾ, ಸುಶೀಲಮ್ಮ, ಜಯಮ್ಮ ಇತರರಿದ್ದರು.