ತೇರದಾಳದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಕಚೇರಿಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಸ್.ಎಚ್. ತೆಕ್ಕನ್ನವರ ಉದ್ಘಾಟಿಸಿದರು. ನೇಮಣ್ಣ ಸಾವಂತನವರ, ಸಿದ್ದುಕೊಣ್ಣೂರ, ದೇವಲ ದೇಸಾಯಿ, ಪ್ರವೀಣ ನಾಡಗೌಡ, ಗೌತಮ ರೋಡಕರ, ಅಶೋಕ ಅಳಗೊಂಡ, ಸುರೇಶ ಕಬಾಡಗಿ ಮತ್ತಿತರರಿದ್ದಾರೆ. 
ಜಿಲ್ಲೆ

ಗ್ಯಾರಂಟಿ ಯೋಜನೆ ಜಗತ್ತಿಗೆ ಮಾದರಿ

ವಿನಯ ಆಶೋಕ ನಾಯ್ಕ

ತೇರದಾಳ (ಗ್ರಾ): ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು, ರಾಜ್ಯದಲ್ಲಿ ಹಲವು ಯೋಜನೆಗಳ ಮೂಲಕ ಜಾತ್ಯತೀತವಾಗಿ ಎಲ್ಲರಿಗೂ ಧನಸಹಾಯ ನೀಡಿದೆ. ಬಹಳಷ್ಟು ಜನ ಈ ಯೋಜನೆಯಿಂದ ಅಭಿವೃದ್ಧಿಯಾಗುತ್ತಿಲ್ಲವೆಂದು ಅಪಸ್ವರ ತೆಗೆದಿದ್ದರು. ಆದರೆ, ಸರ್ಕಾರ ಕೊಟ್ಟಂತಹ ಹಣವನ್ನು ತಾಯಂದಿರು ಕೂಡಿಟ್ಟು ತಮ್ಮ ಮಕ್ಕಳ ಶಿಕ್ಷಣಕ್ಕೆ, ಕುಟುಂಬದ ನಿರ್ವಹಣೆಗೆ, ಸ್ವ ಉದ್ಯೋಗಕ್ಕೆ ಬಳಸಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಸ್.ಎಚ್. ತೆಕ್ಕನ್ನವರ ಹೇಳಿದರು.

ಪಟ್ಟಣದ ಯಲ್ಲಮ್ಮನ ಗುಡಿ ಹತ್ತಿರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ತೇರದಾಳ ತಾಲೂಕು ಮಟ್ಟದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರ ಇಡೀ ಜಗತ್ತಿನಲ್ಲೇ ಮಾದರಿಯಾಗಿದೆ ಎಂಬುದನ್ನು ಮರೆಯಬಾರದು. ಆರ್ಥಿಕ ತಜ್ಞರಾದ ಸಿದ್ಧರಾಮಯ್ಯನವರು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ರಾಜ್ಯವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಕಾರಣ ಈ ಯೋಜನೆ ಸಲವಾಗಿದೆ, ಇದರಿಂದ ಬಡವರ ಉದ್ಧಾರವಾಗಿದೆ ಎಂದರು.

ತೇರದಾಳ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ನೇಮಣ್ಣ ಸಾವಂತನವರ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯನವರು ಯಾವಾಗಲೂ ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಎಷ್ಟೊ ಹೆಣ್ಣುಮಕ್ಕಳು ಗೃಹಲಕ್ಷ್ಮಿ ಹಣದಿಂದ ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶಕ್ತಿ ಯೋಜನೆ ಮೂಲಕ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯನವರಿಗೆ ಶುಭವಾಗಲೆಂದು ಹರಸಿ ಬಂದಿದ್ದಾರೆ. ಆ ತಾಯಂದಿರ ಬೆಂಬಲವಿರುವವರೆಗೆ ನಮ್ಮ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗದು ಎಂದರು.

ಕಾಂಗ್ರೆಸ್ ಯುವ ಮುಖಂಡ ಸಿದ್ದುಕೊಣ್ಣೂರ ಮಾತನಾಡಿದರು. ಮುಖಂಡರಾದ ದೇವಲ ದೇಸಾಯಿ, ಪ್ರವೀಣ ನಾಡಗೌಡ, ಗೌತಮ ರೋಡಕರ, ಅಶೋಕ ಅಳಗೊಂಡ, ಸುರೇಶ ಕಬಾಡಗಿ, ಸುಕುಮಾರಗೌಡ, ಶಿವಾನಂದ ನಡುವಿನಕೇರಿ, ಸುರೇಶಗೌಡ ಪಾಟೀಲ, ಅಶೋಕ ಉಳ್ಳಾಗಡ್ಡಿ, ಕುಮಾರ ಸರಿಕರ, ಸಂಜು ಹಾಡಕಾರ, ಶೆಟ್ಟೆಪ್ಪ ಸುಣಗಾರ, ರಾಜೇಸಾಬ ನಗಾರ್ಜಿ, ಧನಪಾಲ ಬೋದೆನ್ನವರ, ಮೌಲಾಲಿ ಚಿತ್ರಭಾನುಕೊಟೆ, ಸಾಗರ ಶಿರಹಟ್ಟಿ, ಅಪ್ಪಾಸಾಬ ಕಾಗಿ, ಪ್ರಭು ಹಿಪ್ಪರಗಿ ಮತ್ತಿತರರಿದ್ದರು. ವಿಶ್ವನಾಥ ಹಿರೇಮಠ ಪೂಜೆ ಸಲ್ಲಿಸಿದರು. ಪರಸಪ್ಪ ಮಾಸ್ತಿ ಕಾರ್ಯಕ್ರಮ ನಿರ್ವಹಿಸಿದರು.