ಜಿಲ್ಲೆ

ಎಲ್ಲರಿಗೂ ಮಾದರಿ ಗುರುವಂದನೆ ಕಾರ್ಯಕ್ರಮ

ಸೋಮಲಿಂಗ ತಳವಾರ

ಮೂಡಲಗಿ: ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗುರುಗಳನ್ನು ಸ್ಮರಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದು ಶ್ಲಾನೀಯ ಎಂದು ಮೂಡಲಗಿ ಶಿಣ ಸಂಸ್ಥೆಯ ಚೇರ್ಮನ್​ ವೆಂಕಟೇಶ ಸೋನವಾಲ್ಕರ ಹೇಳಿದರು.

ಪಟ್ಟಣದ ಮೂಡಲಗಿ ಶಿಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 1999ನೇ ಸಾಲಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಮತ್ತು 25 ವರ್ಷಗಳ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಸಂಗಮೇಶ ಗುಜಗೊಂಡ ಮಾತನಾಡಿ, ಗುರು&ಶಿಷ್ಯ ಸಂಬಂಧ ದೊಡ್ಡದು ಎಂದರು. ವಿದ್ಯಾರ್ಥಿನಿ ಆಶಾ ಬೆಳಕೊಡ ಮಾತನಾಡಿ, ಕೇವಲ ಪಠ್ಯವಲ್ಲದೆ ಮೌಲ್ಯಾಧಾರಿತ ಶಿಣ ನೀಡಿದ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ಅವರನ್ನು ಗೌರವಿಸುವ ಮೂಲಕ ಕತರಾಗಿರೋಣ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಆರ್​.ಎ. ಶಾಸ್ತ್ರಿಮಠ, ಗ್ರಂಥಪಾಲಕ ಬಾಲಶೇಖರ ಬಂದಿ, ಭೂಗೋಳ ಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್​. ಎಲ್​. ಚಿತ್ರಗಾರ, ಉಪನ್ಯಾಸಕಿ ಬಸಮ್ಮ ಭಾಗೋಜಿ, ವಸತಿ ನಿಲಯ ಮೇಲ್ವಿಚಾರಕ ಲಕ್ಷ$್ಮಣ ಸದಲಗಿ ಮಾತನಾಡಿದರು. ಪ್ರಕಾಶ ಲೋಗಾವಿ, ಶಂಕರ ಡೋಣಿ, ವಕೀಲ ಬಿ.ಬಿ. ಬೋರಗಲ್​, ವಿಠ್ಠಲ ಬಡಗಣ್ಣವರ, ವಿಶ್ರಾಂತ ದೆಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್​.ಮುನ್ನೊಳಿ, ಜಿ. ಸಿದ್ದರಾಮ ರೆಡ್ಡಿ, ಡಾ.ಬಿ.ಸಿ. ಪಾಟೀಲ, ಎಸ್​.ಜಿ. ನಾಯಕ್​, ಗ್ರಂಥಪಾಲಕ ಡಾ.ಬಸವಂತ ಬರಗಾಲಿ, ಡಿ.ಬಿ. ಮುತ್ನಾಳ, ಕೆ.ಕೆ. ಕಾಂಬಳೆ, ಡಿ.ಡಿ. ಹೊಸಮನಿ, ಮನೋಹರ ಲಮಾಣಿ, ಪಾಂಡು ಬುದ್ನಿ, ಅರ್ಜುನ ಗಸ್ತಿ ಇತರರಿದ್ದರು.