ದೊಡ್ಡಬಳ್ಳಾಪುರದ ಡಿ.ಕ್ರಾಸ್​ ಬಳಿಯ ಮೊಬೈಲ್​ ಅಂಗಡಿ ಶಾರ್ಟ್​ ಸಕ್ಯೂರ್ಟ್​ನಿಂದಾಗಿ ಸುಟ್ಟುಕರಕಲಾಗಿರುವುದು. 
ಜಿಲ್ಲೆ

ಬೆಂಕಿಗಾಹುತಿಯಾದ ಮೊಬೈಲ್​ ಅಂಗಡಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್​ ಬಳಿ ಭಾನುವಾರ ರಾತ್ರಿ ಶಾರ್ಟ್​ ಸಕ್ಯೂರ್ಟ್​ನಿಂದಾಗಿ ಮೊಬೈಲ್​ ಅಂಗಡಿ ಸುಟ್ಟು ಕರಕಲಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಹೊಸ ಮೊಬೈಲ್​ ಮೊಬೈಲ್​ಗಳು , ಕಂಪ್ಯೂಟರ್​, ಸರ್ವೀಸ್​ ಆಕ್ಸೆಸರಿಸ್​, ಪ್ರಿಂಟರ್​, ನಗದು ಸೇರಿ ಇತರ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ಅಂಗಡಿ ಮಾಲೀಕ ವಿಜಯಕುಮಾರ್​ ತಿಳಿಸಿದ್ದಾರೆ. ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದಾಗ ಅವಡ ಸಂಭವಿಸಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.