ಕಾಸರಗೋಡು: ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಚೀಮೇನಿ ಕಾರಾಗೃಹದ ಇಬ್ಬರು ಕೈದಿಗಳಿಂದ ಎರಡು ಮೊಬೈಲ್‌ಗಳನ್ನು ಜೈಲ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾರಾಗೃಹದ ಹೊಸ ಬ್ಯಾರಕ್‌ನ ನೆಟ್‌ಗಾರ್ಡ್ ಅಧಿಕಾರಿ ಹಾಗೂ ಸಹಾಯಕ ಕಾರಾಗೃಹ ಅಧಿಕಾರಿ ನಡೆಸಿದ ಕಾರ್ಯಾಚರಣೆಯಲ್ಲಿ ಮೊಬೈಲ್ ಪತ್ತೆಹಚ್ಚಲಾಗಿದೆ. ಈ ಬಗ್ಗೆ ಚೀಮೇನಿ ಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಬು ಹಾಗೂ ಅರುಣ್‌ಫಿಲಿಪ್ ಎಂಬುವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಇವರಿಗೆ ಮೊಬೈಲ್ ಪೂರೈಸಿದವರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.