ಮಕ್ಕಳ ಛದ್ಮವೇಷ ಕಾರ್ಯಕ್ರಮ  
ಜಿಲ್ಲೆ

ಮಕ್ಕಳ ಪ್ರತಿಭೆಯನ್ನು ನುಂಗುತ್ತಿದೆ ಮೊಬೈಲ್

ಶನಿವಾರಸಂತೆ: ಸ್ಥಳೀಯ ಬ್ರೈನಿ ಬಿಜ್ ಬಾಲ ವಿಕಾಸ ಮಂದಿರದಲ್ಲಿ ಕೃಷ್ಣಾಷ್ಟಮಿ ಪ್ರಯುಕ್ತ ಶನಿವಾರ ಆರ್.ವಿ.ಕಲ್ಯಾಣ ಮಂಟಪ ಸಭಾಂಗಣದಲ್ಲಿ ಮಕ್ಕಳಿಗೆ ಕೃಷ್ಣ ,ರುಕ್ಮಿಣಿಯ ಛದ್ಮವೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ಮೊಬೈಲ್ ನುಂಗುತ್ತಿದ್ದು ಪಾಲಕರು ಎಚ್ಚೆತ್ತುಕೊಳ್ಳಬೇಕು. ಹೀಗಾಗಿ ಪುಟಾಣಿಗಳನ್ನು ಮೊಬೈಲ್‌ನಿಂದ ದೂರ ಇರಿಸಲು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಎಸ್.ಚೇತನ್‌ಗೌಡ ಮಾತನಾಡಿ, ಮಕ್ಕಳಿಗೆ ಪ್ರಾರಂಭದಿಂದಲೇ ಸಂಸ್ಕಾರ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.


ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಮಾತನಾಡಿ, ಎಲ್ಲ ಶಾಲೆಗಳಲ್ಲೂ ಮಕ್ಕಳನ್ನು ಆಕರ್ಷಿಸಲು ಇಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಇದರಿಂದ ಮಕ್ಕಳು ದೂರದ ಶಾಲೆಗಳಿಗೆ ತೆರಳದೆ ಸ್ಥಳೀಯ ಶಾಲೆಗಳಿಗೆ ಬರುತ್ತಾರೆ ಎಂದರು.
ಸಂಸ್ಥೆಯ ಖಜಾಂಚಿ ಕೃತಿಕಾ ಇತರರು ಇದ್ದರು.