ಗಂಗಾವತಿ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ಸಮುದಾಯ ಭವನದಲ್ಲಿ ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವನ್ನು ತಹಸೀಲ್ದಾರ್ ಮಂಜುನಾಥ ಭೋಗಾವತಿ ಉದ್ಘಾಟಿಸಿದರು. ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ, ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಇತರರಿದ್ದರು. 
ಜಿಲ್ಲೆ

ಉನ್ನತ ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ; ಮಂಜುನಾಥ ಭೋಗಾವತಿ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ಮೊಬೈಲ್ ಗೀಳಿಗೆ ಅಂಟಿಕೊಂಡ ಯುವ ಜನತೆಯಲ್ಲಿ ಕ್ರಿಯಾಶೀಲತೆ ಕುಂಠಿಗೊಂಡಿದ್ದು, ಬೌದ್ಧಿಕತೆ ನಾಶವಾಗಿದೆ ಎಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ಹೇಳಿದರು.

ನಗರದ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಾಲಯ ಸಮುದಾಯಭವನದಲ್ಲಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ಅಮೂಲ್ಯವಾದ ವಿದ್ಯಾರ್ಥಿ ಜೀವನ ವ್ಯರ್ಥವಾಗಬಾರದು. ಉನ್ನತಗುರಿ, ಸತತ ಪ್ರಯತ್ನ ಮತ್ತು ಸನ್ನಢತೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಋಣಾತ್ಮಕ ಮನೋಭಾವನೆಯಿಂದ ಹೊರಬಂದು, ಹೊಸತನಕ್ಕಾಗಿ ಕ್ರಿಯಾಶೀಲತೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಶರಣೇಗೌಡ ಮಾಲಿ ಪಾಟೀಲ್, ಕೋಶಾಧ್ಯಕ್ಷ ಸುರೇಶ ಸಿಂಗನಾಳ್, ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್, ನಯೋಪ್ರಾ ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ನಗರಸಭೆ ಮಾಜಿ ಸದಸ್ಯ ಈ.ಪರಮೇಶ್ವರಪ್ಪ, ಕಂದಾಯ ನಿರೀಕ್ಷಕ ಮಂಜುನಾಥ್ ಹಿರೇಮಠ್, ಉದ್ಯಮಿ ಲಿಂಗಪ್ಪ ಕಮತಗಿ, ಎನ್ನೆಸ್ಸೆಸ್ ಅಧಿಕಾರಿಗಳಾದ ಡಾ.ಸುರೇಶ್ ಗೌಡ, ಡಾ.ವಾಣಿಶ್ರೀ ಪಾಟೀಲ್ ಇತರರಿದ್ದರು.