ಕಲಬುರಗಿ ನಗರದ ಹೊರವಲಯದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಕೈಸಿಗಳಿಗಾಗಿ ಹೊರಗಿನಿಂದ ಕವರ್ ನಲ್ಕಿ ಹಾಕಿ ಎಸೆದು ಹೋದ ಐದು ಮೊಬೈಲ್‌ಗಳು, ಸಿಮ್ ಕಾರ್ಡ್ ಹಾಗೂ ಯುಎಸ್‌ಬಿ ಪತ್ತೆಯಾಗಿವೆ.
ಎಂದಿನಂತೆ ಜೈಲಿನ ಬ್ಯಾರೆಕ್‌ಗಳ ಬೀಗ ತೆರೆಯುವ ಮೊದಲು ಜೈಲಿನ ಆವರಣವನ್ನು ಸಿಬ್ಭಂದಿ ಒಂದು ಸಲ ಶೋಧ ನಡೆಸುತ್ತಾರೆ. ಬಳಿಕವೇ ಬ್ಯಾರೆಕ್ ತೆರೆಯುವುದು ಪದ್ದತಿ. ಹೀಗಿರುವಾಗ ಮಂಗಳವಾರ ಬೆಳಗ್ಗೆ ಬೀಗ ತೆರೆಯುವ ಮೊದಲು ಜೈಲಿನ ಆವರಣದಲ್ಲಿ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಚೀಲ ಪತ್ತೆಯಾದವು.
ಅವನ್ನು ಬಿಚ್ಚಿ ನೋಡಿದಾಗ ಎರಡು ಕಟ್ಟುಗಳಲ್ಲಿ ಮೊಬೈಲ್, ಚಾರ್ಜರ್, ಸಿಮ್ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಧೀಕ್ಷರಾದ ಪಿ.ರಂಗನಾಥ ಅವರು ದೂರು ನೀಡಿದ್ದಾರೆ. ಪತ್ತೆಯಾಗಿರುವ ಮೊಬೈಲ್‌ಗಳನ್ನು ಯಾರೊ ಎಸೆದು ಹೋಗಿದ್ದಾರೆ. ಯಾರ ಹೆಸರಿನಲ್ಲಿವೆ ಪತ್ರೆಮಾಡಲು ಫರಹತಾಬಾದ ಠಾಣೆಗೆ ದೂರು ನೀಡಲಾಗಿದೆ.