ಜಿಲ್ಲೆ

ಮೊಬೈಲ್‌ನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಚಾಲ್ತಿ ಮಾಡಿ 5.80 ಲಕ್ಷ ರೂ. ಮೋಸ

ಹಾನಗಲ್ಲ: ಮೊಬೈಲ್‌ನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಚಾಲ್ತಿ ಮಾಡಿಕೊಂಡು ಪ್ರತ್ಯೇಕ ಎರಡು ಪ್ರಕರಣದಲ್ಲಿ ಒಟ್ಟು 5.80 ಲಕ್ಷ ರೂ. ಲಪಟಾಯಿಸಿದ ಕುರಿತು ಇಲ್ಲಿಯ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕೆಲವರಕೊಪ್ಪದ ಚಂದ್ರಪ್ಪ ಮಹದೇವಪ್ಪ ಸುಣಗಾರ (42) ಹಾಗೂ ಕಾಡಶೆಟ್ಟಿಹಳ್ಳಿಯ ಕುಬೇರಗೌಡ ಶೇಖರಪ್ಪ ಕೋತಂಬ್ರಿ (50) ಎಂಬುವರ ಹಣ ಲಪಟಾಯಿಸಿರುವುದು.
1ನೇ ಪ್ರಕರಣದಲ್ಲಿ ಚಂದ್ರಪ್ಪ ಅವರ ಮೊಬೈಲ್‌ಗೆ ಯಾರೋ ದುಷ್ಕರ್ಮಿಗಳು ಅನವಶ್ಯಕ ಎಸ್‌ಎಂಎಸ್‌ಗಳನ್ನು ಕಳುಹಿಸಿದ್ದಾರೆ. ಅಲ್ಲದೆ ಇದೇ ನೆಪದಲ್ಲಿ ಅವರ ಬ್ಯಾಂಕ್ ಖಾತೆಗೆ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಚಾಲ್ತಿ ಮಾಡಿದ್ದಾರೆ. ನಂತರ ಅವರ ಖಾತೆಯಿಂದ ಮೂರು ಬಾರಿಯಂತೆ ಒಟ್ಟು 1.90 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ.
2ನೇ ಪ್ರಕರಣದಲ್ಲಿ ಕುಬೇರಗೌಡ ಅವರ ಮೊಬೈಲ್‌ನಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಚಾಲ್ತಿ ಮಾಡಿ 3.89 ಲಕ್ಷ ರೂ. ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.