ಖೈರವಾಡಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಾಹಿತಿ ಟಿ.ಎಸ್.ವಂಟಗೂಡಿ ಉದ್ಘಾಟಿಸಿದರು. ಚೆನ್ನಮ್ಮ ನಾಯಕ, ಮಹಾದೇವಿ ದೀಪಾಳೆ, ಸಂತೋಷ ತೇರದಾಳ, ಬಸವರಾಜ ಕಾಂಬಳೆ ಇತರರಿದ್ದರು. 
ಜಿಲ್ಲೆ

ಮೊಬೈಲ್ ಗೀಳಿನಿಂದ ಏಕಾಗ್ರತೆ ಹಾಳು

ಶಂಕರ ಗೆಜ್ಜಿ

ರಾಯಬಾಗ: ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ದೂರದರ್ಶನಗಳ ಭರಾಟೆಯಲ್ಲಿ ಏಕಾಗ್ರತೆ ಮತ್ತು ಸಮಯ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆಂದು ಸಾಹಿತಿ ಟಿ.ಎಸ್. ವಂಟಗೂಡಿ ಖೇದ ವ್ಯಕ್ತಪಡಿಸಿದರು.

ತಾಲೂಕಿನ ಖೈರವಾಡಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಶಿಕ್ಷಣದೊಂದಿಗೆ ಸಂಸ್ಕಾರ, ವಿನಯ ಕಲಿಸಿಕೊಡಬೇಕು ಎಂದರು.

ಪ್ರಧಾನ ಗುರುಮಾತೆ ಚೆನ್ನಮ್ಮ ನಾಯಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ದೀಪಾಳೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ ತೇರದಾಳ, ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ಕಾಂಬಳೆ, ವಕೀಲ ರಾಯಪ್ಪ ಗೊಂಡೆ, ಸಿ.ಆರ್.ಪಿ. ಎಸ್.ಎ ಸುತಾರ, ಸಂಜು ಭಾವಚಿ, ಮಹಾದೇವ ಗೇನೆನವರ, ನಾರಾಯಣ ದಾವಣೆ, ಭೀಮವ್ವ ಹಾವನ್ನವರ, ಸದಾಶಿವ ಜಾಧವ ಪ್ರಣತಿ ತೇರದಾಳೆ ಇತರರಿದ್ದರು.

ಗಾಯತ್ರಿ ಹೋಳ್ಕರ ಸ್ವಾಗತಿಸಿದರು. ಮಂಜುಳಾ ಗೊಂಡೆ ನಿರೂಪಿಸಿದರು. ಹೇಮಲತಾ ಪಾಟೀಲ ವಂದಿಸಿದರು.