ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ಧರ್ಮ ಸಮಾರಂಭದಲ್ಲಿ ಅಭಿನವ ಶ್ರೀಗಳ ಮೊಬೈಲ್ ಜಾಗೃತಿ ಪಾದಯಾತ್ರೆ ಗ್ರಂಥವನ್ನು ಸಂಸದ ಸಾಗರ್ ಖಂಡ್ರೆ ಲೋಕಾರ್ಪಣೆಗೊಳಿಸಿದರು. ಶ್ರೀ ಜಯಶಾಂತಲಿAಗ ಸ್ವಾಮೀಜಿ, ಶ್ರೀ ವೀರೇಶ್ವರ ಶಿವಾಚಾರ್ಯ, ಅಭಿನವ ಶ್ರೀ, ಶಾಸಕ ಶರಣು ಸಲಗರ, ವಿಜಯಸಿಂಗ್, ಮಾಲಾ ನಾರಾಯಣರಾವ, ಧನರಾಜ ತಾಳಂಪಳ್ಳಿ, ವೀರಶೆಟ್ಟಿ ಪಾಟೀಲ್, ನಟಿ ಪಂಕಜಾ, ನೀಲಕಂಠ ರಾಠೋಡ್, ಅರ್ಜುನ ಕನಕ, ಮನೋಹರ ಮೈಸೆ, ಜ್ಞಾನೇಶ್ವರ ಮುಳೆ, ಸಿದ್ದು ಬಿರಾದಾರ ಇದ್ದರು.  
ಜಿಲ್ಲೆ

ಅಭಿನವ ಶ್ರೀಗಳದ್ದು ಸಮಾಜಮುಖಿ ಕಾರ್ಯ

ರಾಜು ಯಮಕನಮರಡಿ

ಬಸವಕಲ್ಯಾಣ: ಗವಿಮಠದ ಪ್ರಗತಿ ಜತೆಗೆ ಆರೋಗ್ಯಪೂರ್ಣ ಸಮಾಜಕ್ಕಾಗಿ ಯುವ ಜನರನ್ನು ಜಾಗೃತಗೊಳಿಸುವ ಅಭಿನವ ಶ್ರೀಗಳ ಸಮಾಜಮುಖಿ ಕಾರ್ಯ ಪ್ರಶಂಸಾರ್ಹ ಎಂದು ಹಿರೇನಾಗಾಂವದ ಶ್ರೀ ಜಯಶಾಂತಲಿAಗ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗವಿಮಠದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ೧೯ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ೩೮ನೇ ಜನ್ಮದಿನ ನಿಮಿತ್ತ ಶನಿವಾರ ಆಯೋಜಿಸಿದ್ದ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ೧೪ನೇ ವಯಸ್ಸಿನಲ್ಲಿಯೇ ಅಭಿನವ ಶ್ರೀಗಳ ಪಟ್ಟಾಧಿಕಾರ ಜರುಗಿದಾಗ ಮಠದಲ್ಲಿ ಏನೂ ಇರಲಿಲ್ಲ. ಈಗ ಸಾಕಷ್ಟು ಪ್ರಗತಿಯಾಗಿದೆ. ಘಟದಿಂದ ಮಠವಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ನೇತೃತ್ವ ವಹಿಸಿದ್ದ ಗವಿ ಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿ, ಭಕ್ತರ ಕಲ್ಯಾಣವೇ ಗುರುಗಳ ಆಶಯವಾಗಿರುತ್ತದೆ. ಗುರು ತೋರುವ ಮಾರ್ಗದಲ್ಲಿ ಭಕ್ತರು ಜೀವನ ಸಾಗಿಸಿದಾಗ ಶಾಂತಿ, ನೆಮ್ಮದಿ, ಪ್ರಗತಿ ಕಾಣಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣು ಸಲಗರ ಮಾತನಾಡಿ, ಪ್ರತಿವರ್ಷ ಜನ್ಮದಿನೋತ್ಸವ ನಿಮಿತ್ತ ಪಾದಯಾತ್ರೆ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಅಭಿನವ ಶ್ರೀಗಳ ಸಮಾಜಪರ ಕಾಳಜಿ ಮಹತ್ವದ್ದು ಎಂದರು.

ಸಾಹಿತಿ ವೀರಶೆಟ್ಟಿ ಪಾಟೀಲ್ ಸಂಪಾದಿತ ಕವನ ಸಂಕಲನ, ಅಭಿನವ ಶ್ರೀಗಳ ಮೊಬೈಲ್ ಜಾಗೃತಿ ಪಾದಯಾತ್ರೆ ಗ್ರಂಥ ಲೋಕಾರ್ಪಣೆಗೊಳಿಸಿದ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಸಮಾಜದ ಹಿತದೃಷ್ಟಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಅಭಿನವ ಶ್ರೀಗಳ ಕಾರ್ಯಕ್ಕೆ ಬೆಂಬಲಿಸುವ ಮೂಲಕ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಜಹೀರಾಬಾದ್‌ನ ಶ್ರೀ ವೀರೇಶ್ವರ ಶಿವಾಚಾರ್ಯ ಆಶೀರ್ವಚನ ನೀಡಿದರು. ಮಾಜಿ ಎಂಎಲ್ಸಿ ವಿಜಯಸಿಂಗ್, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ, ಹಿರಿಯ ಚಿತ್ರನಟಿ ಡಾ.ಪಂಕಜ ವೆಂಕಟರಮಣ, ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿದರು.

ಎಂಎಲ್‌ಸಿ ಎಂ.ಜಿ. ಮುಳೆ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಪ್ರಮುಖರಾದ ಬಾಬು ಹೊನ್ನಾನಾಯಕ, ನೀಲಕಂಠ ರಾಠೋಡ್, ಅರ್ಜನ ಕನಕ, ಮನೋಹರ ಮೈಸೆ, ಶಾಂತಲಿAಗ ಮಠಪತಿ, ಜ್ಞಾನೇಶ್ವರ ಮುಳೆ, ರಾಜಶೇಖರ ಸಾಹು ಸೀರಿ, ಶರಣಪ್ಪ ಜಿ.ಬಿರಾದಾರ, ಶಿವಲಿಂಗಯ್ಯ ಕನ್ನಾಡೆ, ಸಿದ್ದಪ್ಪ ಉಳ್ಳೆ, ವೀರಶೆಟ್ಟಿ ಪಾಟೀಲ್, ಸಿದ್ದು ಬಿರಾದಾರ, ಶ್ರೀನಿವಾಸ ಪಾಟೀಲ್ ಇತರರಿದ್ದರು.
ರಮೇಶ ರಾಜೋಳೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಆಲಗೂಡೆ ನಿರೂಪಣೆ ಮಾಡಿದರು. ವಿವಿಧೆಡೆಯಿಂದ ಆಗಮಿಸಿದ ಶ್ರೀಮಠದ ಭಕ್ತರು ಡಾ.ಅಭಿನವ ಶ್ರೀಗಳನ್ನು ಸತ್ಕರಿಸಿ ಆಶೀರ್ವಾದ ಪಡೆದರು. ರವಿ ನಾವದಗೇಕರ, ಶ್ರೀಶೈಲ ವಾತಡೆ, ಶಿವಕುಮಾರ ಬಿರಾದಾರ, ಲೋಕೇಶ ಮೋಳಕೆರೆ, ಸಂಜುಕುಮಾರ ಜಾಧವ್, ಶ್ರೀನಿವಾಸ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಪ್ಲಾಸ್ಟಿಕ್‌ಮುಕ್ತ ಜೀವನ ಕುರಿತು ಜನಜಾಗೃತಿಗಾಗಿ ಅಭಿನವ ಶ್ರೀಗಳು ಪಾದಯಾತ್ರೆ ನಡೆಸಿದ್ದಾರೆ. ಶ್ರೀಗಳ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ. ಭವಿಷ್ಯದಲ್ಲಿ ಆರೋಗ್ಯಪೂರ್ಣ ಜೀವನಕ್ಕೆ ಉತ್ತಮ ಪರಿಸರ ಸಂರಕ್ಷಣೆಗಾಗಿ ಇಂದಿನಿಂದಲೇ ಪ್ಲಾಸ್ಟಿಕ್ ಬಳಸದೆ ಪ್ಲಾಸ್ಟಿಕ್‌ಮುಕ್ತ ಜೀವನಕ್ಕೆ ಸಂಕಲ್ಪ ಮಾಡಬೇಕಾದ ಅಗತ್ಯವಿದೆ.
| ಸಾಗರ ಖಂಡ್ರೆ ಸಂಸದ

ಬಸವಕಲ್ಯಾಣದಲ್ಲಿ ಮುಂದಿನ ವರ್ಷ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ನಡೆಯಲಿದ್ದು, ಹಾರಕೂಡದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಎಲ್ಲ ಪಕ್ಷಗಳ ಮುಖಂಡರು ಭಾಗಿಯಾಗಲಿದ್ದು, ಈ ಭಾಗದ ಸ್ವಾಮೀಜಿಗಳನ್ನು ಆಹ್ವಾನಿಸಿ ಕಾರ್ಯಕ್ರಮದ ಯಶಸ್ಸಿನ ಕುರಿತು ಚರ್ಚಿಸಲಾಗುವುದು.
| ಶರಣು ಸಲಗರ ಶಾಸಕ

ಹೆಚ್ಚು ಹೊತ್ತು ಮೊಬೈಲ್ ಬಳಕೆ ಆರೋಗ್ಯಕ್ಕೆ ಅಪಾಯಕಾರಿ. ಈ ಕುರಿತು ಜನಜಾಗೃತಿಗಾಗಿ ಕಳೆದ ವರ್ಷ ಅಭಿನವ ಶ್ರೀಗಳು ಅಭಿಯಾನ ನಡೆಸಿದ್ದಾರೆ. ಶ್ರೀಗಳ ಕಾಳಜಿ ಅರ್ಥ ಮಾಡಿಕೊಂಡು ಅನಗತ್ಯ ಮೊಬೈಲ್ ಬಳಸದೆ ಅವಶ್ಯಕತೆ ಇದ್ದಾಗ ಮಾತ್ರ ಬಳಸಬೇಕು.
| ವಿಜಯಸಿಂಗ್ ಮಾಜಿ ಎಂಎಲ್‌ಸಿ

ಸಮಾಜದ ಹಿತದೃಷ್ಟಿಯಿಂದ ಅಭಿನವ ಶ್ರೀಗಳು ಜನ್ಮ ದಿನೋತ್ಸವ ನಿಮಿತ್ತ ಜನಜಾಗೃತಿ ಪಾದಯಾತ್ರೆ ನಡೆಸಿದ್ದಾರೆ. ಶ್ರೀಗಳ ಜನಪರ ಕಾಳಜಿ ಮಹತ್ವದ್ದು, ಗುಣಮಟ್ಟದ ಶಿಕ್ಷಣ ಜತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಪಾಲಕರು ಕಾಳಜಿ ವಹಿಸಬೇಕು.
| ಧನರಾಜ ತಾಳಂಪಳ್ಳಿ ಕಾಂಗ್ರೆಸ್ ಮುಖಂಡ