ಘಟನೆ ನಡೆದ ಸ್ಥಳಕ್ಕೆ ಧಾವಿಸಿರುವ ಪೊಲೀಸ್, ಚೂರಿ ಇರಿತಕ್ಕೊಳಗಾಗಿರುವ ಅರುಣ್ ಕಟ್ಟಿಮನಿ. 
ಜಿಲ್ಲೆ

ಗುಂಪು ಘರ್ಷಣೆ: ಇಬ್ರಿಗೆ ಚೂರಿ ಇರಿತ; 2 ತಳ್ಳುಗಾಡಿಗಳಿಗೆ ಬೆಂಕಿ, 5 ಬೈಕ್ ಜಖಂ!

ಬಾಗಲಕೋಟೆ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ತಣ್ಣನೆಯ ವಾತಾವರಣವಿದ್ದರೂ ಇಲ್ಲೊಂದು ಕಡೆ ದ್ವೇಷದ ದಳ್ಳುರಿಗೆ ಬಡಪಾಯಿಗಳ ತಳ್ಳುಗಾಡಿಗಳು ಹೊತ್ತಿ ಉರಿದು ಬೆಂಕಿಗೆ ಆಹುತಿಯಾಗಿವೆ. ಮಾತ್ರವಲ್ಲ ಇಬ್ಬರಿಗೆ ಚೂರಿ ಇರಿಯಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಈ ಗುಂಪು ಘರ್ಷಣೆ ಸಂಭವಿಸಿದೆ. ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಎಂಬವರಿಗೆ ಚೂರಿಯಿಂದ ಇರಿಯಲಾಗಿದ್ದು, ಯಮನೂರಿ ಚುಂಗಿನ ಎಂಬವರಿಗೂ ಗಾಯವಾಗಿದೆ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾರುಕಟ್ಟೆಯಲ್ಲಿ ಒಂದು ಕೋಮಿನವರಿಗೆ ಸೇರಿದ ತರಕಾರಿ ಚೆಲ್ಲಿದ್ದಲ್ಲದೆ ಎರಡು ತಳ್ಳುಗಾಡಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಐದು ಬೈಕ್​ಗಳು ಜಖಂಗೊಂಡಿವೆ. ಈ ಗುಂಪು ಘರ್ಷಣೆಯಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಕೆರೂರು ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದೆ. ಪೊಲೀಸರು ಹರಸಾಹಸದಿಂದ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಿಗಿ ಬಂದೋಬಸ್ತ್​​ಗೆ ಏರ್ಪಾಡು ಮಾಡಲಾಗಿದೆ.