-ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆ
ಬೆಳಗಾವಿ:ರಾಜ್ಯದಲ್ಲಿ ಡಿಸಿಎಂ ಹುದ್ದೆ ಖಾಲಿ ಇಲ್ಲ. ನಾನು ಯಾರು ಪರ ಇಲ್ಲಾ, ಯಾರ ವಿರೋಧ ಇಲ್ಲ. ಡಿಸಿಎಂ ಸ್ಥಾನ ಖಾಲಿ ಇಲ್ಲ ಖಾಲಿ ಇದ್ದಾಗ ಹೈಕಮಾಂಡ್ ನೋಡುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮದು ಜಾತ್ಯಾತೀತ ನಿಲುವು ಇರುವ ಪಕ್ಷ ಕಾಂಗ್ರೆಸ್.ವವೈಯಕ್ತಿಕವಾಗಿ ಕೆಲವರು ಮಾತಾಡಿದ್ದಾರೆ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಜವಾಬ್ದಾರಿ ಅಧ್ಯಕ್ಷರು, ಮುಖ್ಯಮಂತ್ರಿ ಇದಾರೆ ನೋಡಿಕೊಳ್ಳುತ್ತಾರೆ.ಡಿಸಿಎಂ ಚರ್ಚೆ ವಿಚಾರದ ಕುರಿತು ನಾನು ಮಾತಾಡಲ್ಲ ಎಂದರು.
ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ವಾಸ್ತವ್ಯ ವಿಚಾರಕ್ಕೆ ಉತ್ತರಿಸಿದ ಅವರು, ಅಧ್ಯಕ್ಷರು ನೋಡಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣಕ್ಕೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಡಿಕೆಶಿ ಅಥವಾ ಡಿಕೆ ಸುರೇಶ್ ಯಾರು ಅಂತಾ ತೀರ್ಮಾನ ಆಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಕುಳಿತು ಚರ್ಚೆ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ರಾಜೇಂದ್ರ ಪಾಟೀಲ, ಮಂಜುನಾಥ ತಡಸಲೂರ ಇತರರಿದ್ದರು.