ಮಂಗಳೂರು: ಮಹಿಳಾ ದಿನಾಚರಣೆ ಅಂಗವಾಗಿ ಅದಾನಿ ಫೌಂಡೇಶನ್ ಸುಪೋಷನ್ ಯೋಜನೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಬೈಕಂಪಾಡಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಸ್ವಚ್ಛತೆ, ಆರೋಗ್ಯ, ಗಂಡು-ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿ ಅರಿವು ನೀಡಲಾಯಿತು.
ಅದಾನಿ ಫೌಂಡೇಶನ್‌ನ ಸುಪೋಷಣ್ ಅಧಿಕಾರಿ ಡಾ.ಪ್ರೇಮಾ ಡಿಸೋಜ, ಸುರತ್ಕಲ್ ವಲಯದ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಅನುಪಮಾ ಮೊದಲಾದವರು ಉಪಸ್ಥಿತರಿದ್ದರು.