ಗದಗ: ಕನ್ನಡದ ಖ್ಯಾತ ಸಂಶೋಧಕರಲ್ಲಿ ಒಬ್ಬರಾದ ಡಾ.ಎಂ.ಎಂ ಕಲಬುರ್ಗಿಯವರು ನಾಡಿನ ಸಾಹಿತ್ಯ-ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅದ್ಭುತವಾಗಿದ್ದು, ಅವರೇ ಹೇಳಿಕೊಂಡAತೆ ಬಸವಣ್ಣ ಹಾಗೂ ಕನ್ನಡಕ್ಕಾಗಿ ಬದುಕಿದವರಾಗಿದ್ದರು ಎಂದು ಹಿರಿಯ ವೈದ್ಯರಾದ ಡಾ.ಕೆ.ಯೋಗೇಶನ್ ನುಡಿದರು.
ಅವರು ಇತ್ತೀಚೆಗೆ ನಗರದ ಶಿವಾನಂದ ನಗರದಲ್ಲಿರುವ ಬಸವದಳದಲ್ಲಿ ಜರುಗಿದ ೧೫೫೬ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಡಾ. ಎಂ.ಎಂ ಕಲಬುರ್ಗಿ. ಕಲಬುರ್ಗಿಯವರ ಕುರಿತು ಉಪನ್ಯಾಸ ನೀಡಿ, ನೂರಾರು ಶಾಸನಗಳನ್ನು ಭೇದಿಸಿ ಕಾಲಗರ್ಭದಲ್ಲಿ ಹುದುಗಿದ್ದ ಮಹತ್ವದ ಸತ್ಯಗಳನ್ನು ಅನಾವರಣಗೊಳಿಸಿದ ಕಲಬುರ್ಗಿಯವರು ವಿಶೇಷವಾಗಿ ವಚನಸಾಹಿತ್ಯದ ಅಧ್ಯಯನ ಹಾಗೂ ಪ್ರಸಾರಕ್ಕೆ ಆದ್ಯತೆ ನೀಡಿದ್ದರು. ಲಿಂಗಾಯತ ಧರ್ಮವು ಕನ್ನಡಿಗರ ಮೊದಲ ಧರ್ಮ ಎನ್ನುವುದನ್ನು ಪ್ರಬಲವಾಗಿ ಪ್ರತಿಪಾದಿಸಿದ ಕಲಬುರ್ಗಿಯವರು ಸರ್ಕಾರ ವಚನಸಾಹಿತ್ಯವನ್ನು ಮುದ್ರಿಸಲು ಕಾರಣರಾದರು. ಸತತ ಶ್ರಮದಿಂದ ಲಿಂಗಾಯತ ದೇಶಗತಿ-ಸಂಸ್ಥಾನಗಳ ಅಧ್ಯಯನದಲ್ಲಿ ಯಶಸ್ವಿಯಾದ ಅವರು, ಹಂಪಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ ಗಮನಾರ್ಹ ಸೇವೆ ಸಲ್ಲಿಸಿದರು. ಕಲಬುರ್ಗಿಯವರ ಅಪಾರ ಶಿಷ್ಯಗಣವೇ ಸದ್ಯ ನಾಡಿನಲ್ಲಿ ಸಕ್ರಿಯರಾಗಿ ಕನ್ನಡಕ್ಕೆ ಸೇವೆ ಸಲ್ಲಿಸುತ್ತಿದ್ದು, ವಯಸ್ಸಿನಲ್ಲಿ ಹಿರಿಯರಾದರೂ ಅವರು ನನಗೆ ವಿದ್ಯಾಗುರುಗಳಾಗಿದ್ದರು ಎಂಬುದನ್ನು ಸ್ಮರಿಸಿಕೊಂಡರು. ತಮ್ಮ ದಿಟ್ಟ ನುಡಿ-ನಿಲುವುಗಳಿಂದ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕಲಬುರ್ಗಿಯವರ ಹೇಳಿಕೆಯೊಂದು ತಿರುಚಲ್ಪಟ್ಟಿತು ಅದೇ ಕಾರಣಕ್ಕೆ ಅವರು ಕೊಲೆಯಾಗಿದ್ದು ನಾಡಿನ ಇತಿಹಾಸದಲ್ಲಿ ಕಪ್ಪುಚುಕ್ಕೆ ಇಟ್ಟಂತಾಯಿತು ಎಂದರು.
ಸಮಾರAಭದ ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ವಿ.ಕೆ ಕರೇಗೌಡ್ರ ವಹಿಸಿದ್ದರು. ಗೋಕಾಕ್ ಕೆ.ವ್ಹಿ.ಜಿ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕರಾದ ಸಂತೋಷ ನರಗುಂದ, ಹಿರಿಯರಾದ ಕೆ.ವ್ಹಿ ಗೋಣಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಸವದಳದ ವಾರ್ಷಿಕ ಸರ್ವಸದಸ್ಯರ ಸಭೆ (ಜಿ.ಬಿ ಮೀಟಿಂಗ್) ಜರುಗಿತು ಅಲ್ಲದೇ ಇತ್ತೀಚೆಗೆ ಇಸ್ರೋ ಚಂದ್ರಯಾನ-೩ ಯೋಜನೆಯನ್ನು ಯಶಸ್ಸು ಸಾಧಿಸಿದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಬಸವದಳದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಎಸ್.ಎ ಮುಗದ ಸ್ವಾಗತಿಸಿದರೆ ಗೌರಕ್ಕ ಬಡಿಗಣ್ಣವರ ಶರಣು ಸಮರ್ಪಣೆಗೈದರು. ಪ್ರಕಾಶ ಅಸುಂಡಿ ನಿರೂಪಿಸಿದರು. ಬಸವದಳದ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.