oplus_2 
ಜಿಲ್ಲೆ

ಎಂಎಲ್‌ಸಿ ಕೆ.ವಿವೇಕಾನಂದ ಗಿಡನೆಟ್ಟು ವರ್ಷಾಚರಣೆ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರು ಗಿಡನೆಟ್ಟು ವರ್ಷಾಚರಣೆ ಮಾಡಿದರು.

ವಿಜಯನಗರ 2ನೇ ಹಂತದ ಹಂಪಿ ವೃತ್ತದ ಬಳಿ ಇರುವ ಸಾರ್ವಜನಿಕ ಉದ್ಯಾನ (ವಿದ್ಯಾರಣ್ಯ)ದಲ್ಲಿ 108 ಗಿಡಗಳನ್ನು ನೆಟ್ಟರು. ನಗರಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾ ಶಂಕರೇಗೌಡ, ಸುಬ್ಬಯ್ಯ ಇತರರು ಇದ್ದರು.