ಜಿಲ್ಲೆ

ಆಗ್ನೇಯ ಪದವೀಧರ ಚುನಾವಣೆ: ತುಮಕೂರಿನಲ್ಲಿ ಮತದಾನ ಆರಂಭ

shastrimath

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ ಮತದಾನ ಆರಂಭವಾಗಿದೆ. ಜಿಲ್ಲೆಯಲ್ಲಿ 29415 ಮತದಾರರು ಹಕ್ಕು ಹೊಂದಿದ್ದು 64 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಂಜೆ 5 ರವರೆಗೆ ಮತದಾನಕ್ಕೆ ಅವಕಾಶ ಇರಲಿದೆ. ಜಿಲ್ಲಾಕೇಂದ್ರದಲ್ಲಿ 10 ಹಾಗೂ 6 ತುಮಕೂರು ತಾಲೂಕು ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ.

15 ಅಭ್ಯರ್ಥಿಗಳ ಭವಿಷ್ಯ: ಜೆಡಿಎಸ್ ನ ಚೌಡರೆಡ್ಡಿ ತೂಪಲ್ಲಿ, ಬಿಜೆಪಿಯ ಚಿದಾನಂದಗೌಡ ಹಾಗೂ ಕಾಂಗ್ರೆಸ್ ನ ರಮೇಶ್ ಬಾಬು ಸೇರಿದಂತೆ 15 ಮಂದಿ ಕಣದಲ್ಲಿದ್ದಾರೆ.  ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಒಟ್ಟು 5 ಜಿಲ್ಲೆ ವ್ಯಾಪ್ತಿಯನ್ನು ಕ್ಷೇತ್ರ ಹೊಂದಿದೆ. ಒಟ್ಟು 1 ಲಕ್ಷ 1 ಸಾವಿರ ಮತದಾರರು ಹಕ್ಕು ಹೊಂದಿದ್ದಾರೆ.

ಬಿಜೆಪಿಗೆ ಬಂಡಾಯ ಕಾಟ: ಆಡಳಿತರೂಢ ಬಿಜೆಪಿಗೆ ಬಂಡಾಯ ಕಾಟವಿದೆ. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಹಾಗೂ ಹಾಲನೂರು ಎಸ್ ಲೇಪಾಕ್ಷ ಬಂಡಾಯ ಅಭ್ಯರ್ಥಿಗಳಾಗಿದ್ದು ಬಿಜೆಪಿ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ, ಚುನಾವಣೆ ಹೆಚ್ಚು ಪೈಪೋಟಿಯಿಂದ‌ ಕೂಡಿರಲಿದೆ.