ಮೈಸೂರು: ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಎಸ್ಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಹ.ರಾ. ಮಹೇಶ್ ಅವರನ್ನು ಮತದಾರರು ಬೆಂಬಲಿಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮನವಿ ಮಾಡಿದರು.
ಮೇಲ್ಮನೆಗೆ ಬುದ್ಧಿಜೀವಿಗಳು, ವಿಚಾರವಂತರು, ಶಿಕ್ಷಣ ಕ್ಷೇತ್ರದ ತಜ್ಞರು ಪ್ರವೇಶಿಸುತ್ತಿಲ್ಲ. ಆದ್ದರಿಂದ ಮತದಾರರು ಜಾತಿ, ಧರ್ಮ, ಆಸೆ, ಆಮಿಷಗಳಿಗೆ ಮರುಳಾಗದೆ ಮಹೇಶ್ ಅವರನ್ನು ಆಯ್ಕೆ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಡಾ.ಹ.ರಾ. ಮಹೇಶ್, ಪಕ್ಷದ ಪ್ರಮುಖರಾದ ಗೋಪಿನಾಥ್, ಎಂ. ಕೃಷ್ಣಮೂರ್ತಿ, ಚಂದ್ರಶೇಖರ್, ಬಸವಣ್ಣ ಇದ್ದರು.