ಜಿಲ್ಲೆ

ಶಾಸಕರು ರಮೇಶ್​ಕುಮಾರ್​ ವಿರುದ್ಧ ಆರೋಪ ಮಾಡುವುದು ಬಿಡಲಿ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ಮಾಜಿ ಶಾಸಕ ರಮೇಶ್​ಕುಮಾರ್​ ವಿರುದ್ಧ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಆರೋಪ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಕೆಪಿಸಿಸಿ ಸದಸ್ಯ ಸಂಜಯ್​ರೆಡ್ಡಿ ಹೇಳಿದರು.

ಪಟ್ಟಣದ ನಗರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಕಾಂಗ್ರೆಸ್​ನಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್​ಕುಮಾರ್​ ಅವರು ಶಾಸಕರಿದ್ದ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗಲೂ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸಿದರು ಎಂದರು.

ರಾಜ್ಯ ಸರ್ಕಾರದಿಂದ ಅನುದಾನಗಳನ್ನು ತರಲು ನಿಮಗೆ ಯೋಗ್ಯತೆ ಇಲ್ಲ. ನೀವು ಕಮೀಷನ್​ಗಾಗಿ ಅಧಿಕಾರಿಗಳನ್ನು ಪೀಡಿಸುತ್ತಿರಾ, ಆದ್ದರಿಂದ ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ. ನೀವು ಅಧಿಕಾರಿಗಳ ಬಳಿ ಕಮೀಷನ್​ ಪಡಿಯುತ್ತಿದ್ದೀರಾ, ಪಡಿಯುತ್ತಿಲ್ಲವಾ ಎಂದು ಪ್ರಮಾಣ ಮಾಡಿ ನೋಡೋಣ ಎಂದು ಸವಾಲು ಹಾಕಿದರು.

ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ದಿಂಬಾಲ್​ ಅಶೋಕ್​ ಮಾತನಾಡಿ, ಇತ್ತೀಚಿಗೆ ನಡೆದ ಜೆಡಿಎಸ್​ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಮಾತಿನ ಬರದಲ್ಲಿ ಮಾಜಿ ಶಾಸಕರು ಕ್ಷೇತ್ರ ಅಭಿವದ್ಧಿ ಅಡ್ಡಿಪಡಿಸುತ್ತಿದ್ದಾರೆಂದು ಹೇಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಎಷ್ಟು ಸರಿ?. ಮಾಜಿ ಶಾಸಕರು ಈ ಭಾಗದಲ್ಲಿ ಸೂಪರ್​ ಸ್ಟೆಷಾಲಿಟಿ ಆಸ್ಪತ್ರೆ, ಕಾನ್ಸರ್​ ಆಸ್ಪತ್ರೆ ತೆರೆಯಬೇಕು ಎನ್ನುವ ಜನರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯ ಹಮ್ಮಿಕೊಂಡಿದ್ದರು ಆಗ ಅಡ್ಡಪಡಿಸಿರುವುದು ನಿಮ್ಮ ಅನುಯಾಯಿಗಳಲ್ಲವೆ ಎಂದು ಪ್ರಶ್ನಿಸಿದರು.

ಕೋಮುಲ್​ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ ಮಾತನಾಡಿ, ರಮೇಶ್​ಕುಮಾರ್​ ಅವರು ಕ್ಷೇತ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದು, ಅನೇಕ ಬಾರಿ ನಿಮ್ಮ ಅನುಯಾಯಿಗಳಿಂದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಟೀಕಿಸಿದರು.

ನಾಮಿನಿ ಸದಸ್ಯರಾದ ನರಸಿಂಹಮೂರ್ತಿ, ಹೇಮಂತ್​, ಗ್ಯಾರಂಟಿ ಯೋಜನೆ ಅಧ್ಯಕ್ಷ ಮನೋಹರ್​, ಸದಸ್ಯರಾದ ಶಂಕರ್​, ಬಿ.ಎಲ್​.ವೆಂಕಟರೆಡ್ಡಿ, ಮುಖಂಡರಾದ ಸಿ.ಮುನಿಸ್ವಾಮಿ, ವಿಶ್ವನಾಥರೆಡ್ಡಿ, ದೊರಸ್ವಾಮಿರೆಡ್ಡಿ, ಚಲ್ದಿಗಾನಹಳ್ಳಿ ಈರಪ್ಪ, ಗೋವಿಂದರೆಡ್ಡಿ, ಚಾಕಪಲ್ಲಿ ರಘು, ಮುನಿರಾಜು, ವೆಂಕಟೇಶ್​, ಚಲಪತಿ, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಕೇತುಗಾನಹಳ್ಳಿ ನಾಗರಾಜ್​, ಅಂಬೇಡ್ಕರ್​ ಪಾಳ್ಯದ ಶಿವಕುಮಾರ್​, ನಾಗರಾಜ್​, ಶಿವಪ್ರಸಾದ್​, ನಿರಂಜನ್​, ಡಾ.ವೆಂಕಟೇಶ್​, ಸೋಮರಾಜು, ಅಪ್ಪೂರ್​ ವೆಂಕಟೇಶ್​, ಬಾಬು ಇದ್ದರು.