ಆನೇಕಲ್​ ತಾಲೂಕಿನ ಟ್ಟಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್​ ಮುಖಂಡ ಟ್ಟಹಳ್ಳಿ ಸೀನಪ್ಪ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ರಾಮಕೃಷ್ಣ, ಚೂಡಸಂದ್ರ ಮದನ್​ ಇತರರು ಇದ್ದರು. 
ಜಿಲ್ಲೆ

ಬಡಾವಣೆ ನಿವಾಸಿಗಳ ಸಮಸ್ಯೆಗೆ ಶಾಸಕರ ಸ್ಪಂದನೆ

ಆನೇಕಲ್​ : ಕಳೆದ ವಾರ ಬಿದ್ದ ಮಳೆಗೆ ಪೈನಿಯರ್​ ಬಡಾವಣೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಸಾರ್ವಜನಿಕರಿಗೆ ಎದುರಾದ ಸಮಸ್ಯೆಯ ಬಗ್ಗೆ ಸ್ಥಳಿಯರು ಶಾಸಕರ ಗಮನ ಸೆಳೆದಿದ್ದು, ತಕ್ಷಣ ಸರ್ಕಾರದಿಂದ 80 ಲ ರೂ. ಬಿಡುಗಡೆಗೊಳಿಸಿ ತಡೆಗೋಡೆ ಹಾಗೂ ಚರಂಡಿ ಕಾಮಗಾರಿಗೆ ನೆರವು ನೀಡಿದರು ಎಂದು ಕಾಂಗ್ರೆಸ್​ ಮುಖಂಡ ಟ್ಟಹಳ್ಳಿ ಸೀನಪ್ಪ ಹೇಳಿದರು. ತಾಲೂಕಿನ ಟ್ಟಹಳ್ಳಿಯಲ್ಲಿ ಶಾಸಕ ಬಿ.ಶಿವಣ್ಣ ವಿಶೇಷ ಅನುದಾನದಲ್ಲಿ 80 ಲ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳಿಯರ ಸಮಸ್ಯೆ ಅರಿತುಕೊಂಡು ತಕ್ಷಣವೇ ಕಾಮಗಾರಿ ನಡೆಸಲು ಅನುವು ಮಾಡಿಕೊಡುವ ಮೂಲಕ ಶಾಸಕರು ಜನಪರ ಕಾಳಜಿ ಮೆರೆದಿದ್ದಾರೆ ಎಂದರು.

ಹೆಬ್ಬಗೋಡಿ ಬ್ಲಾಕ್​ ಕಾಂಗ್ರೆಸ್​ ಅಧ್ಯ ಬೊಮ್ಮಸಂದ್ರ ಲಿಂಗಣ್ಣ ಮಾತನಾಡಿ, ಆನೇಕಲ್​ ತಾಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ರಸ್ತೆಗಳು ಹಾಳಾಗಿವೆ. ಮಳೆ ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ಶಾಸಕರು ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಸಿದ್ಧರಾಗಿದ್ದಾರೆ. ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ. ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದರು. ಮುಖಂಡರಾದ ಮಂಜುನಾಥ್​, ರಾಯಸಂದ್ರ ವೆಂಕಟೇಶ್​, ವಕೀಲರಾದ ಪ್ರದಿಪ್​, ಮದ್ದೂರಪ್ಪ, ರಾಜು, ವೆಂಕಟೇಶ್​, ಪೈನಿಯರ್​ ಬಡಾವಣೆಯ ವಿನಯ್​ ಗೌಡ, ಭಾಸ್ಕರ್​, ಹೇಮಾ ಮತ್ತು ಗ್ರಾಮಸ್ಥರು, ಬಡಾವಣೆಯ ನಿವಾಸಿಗಳು ಇದ್ದರು.