ವಿಜಯವಾಣಿ ಸುದ್ದಿಜಾಲ ಉಡುಪಿ
ಕೇಂದ್ರ ಬಿಜೆಪಿ ಸರ್ಕಾರವು ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಳ್ತೂರು ಗ್ರಾಮಕ್ಕೆ 1.20 ಕೋಟಿ ರೂ. ವೆಚ್ಚದಲ್ಲಿ ಎರಡು ಮಲ್ಟಿ ಪರ್ಪಸ್ ಸೆಂಟರ್ (ಎಂಪಿಸಿ) ಮಂಜೂರು ಮಾಡಿದೆ. ಬಹೂಪಯೋಗಿ ಈ ಭವನದಿಂದ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶಕ್ತಿ ತುಂಬಲಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿ ತಾಲೂಕಿನ ಕಳ್ತೂರು ಗ್ರಾಪಂ ವ್ಯಾಪ್ತಿಯ ಬುಕ್ಕಿಗುಡ್ಡೆ ಮತ್ತು ಕಲ್ಲುಗುಡ್ಡೆಯಲ್ಲಿರುವ ಕೊರಗರ ಕಾಲನಿಯಲ್ಲಿ ನಿರ್ಮಾಣಗೊಳ್ಳಲಿರುವ ಎಂಪಿಸಿ ಕಾಮಗಾರಿಗೆ ಸೆ.23ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬುಕ್ಕಿಗುಡ್ಡೆ ಮತ್ತು ಕಲ್ಲುಗುಡ್ಡೆಯಲ್ಲಿ ತಲಾ 60 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮುದಾಯ ಭವನ, ಆರೋಗ್ಯ ಉಪಕೇಂದ್ರ, ಗ್ರಂಥಾಲಯ ನಿರ್ಮಾಣಗೊಳ್ಳಲಿದೆ. ಈ ಬಹೂಪಯೋಗಿ ಕಟ್ಟಡಗಳು ಕೊರಗ ಸಮುದಾಯ ಮುಖ್ಯವಾಹಿನಿಗೆ ಬರಲು ಅನುಕೂಲ ಆಗಲಿದೆ. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ