ಜಿಲ್ಲೆ

ಉಡುಪಿ ನಗರ ವ್ಯಾಪ್ತಿ ರಸ್ತೆಗಳ ಅಭಿವೃದ್ಧಿಗೆ ಕ್ರಮ...

ಕೊಳ ವಾರ್ಡ್​ನಲ್ಲಿ ಕಾಂಕ್ರೀಟ್​ ಕಾಮಗಾರಿಗೆ ಯಶ್​ಪಾಲ್​ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೊಳ ವಾರ್ಡ್​ನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಶ್ರೀರಾಮ ರಸ್ತೆಯ ಕಾಂಕ್ರೀಟ್​ ಕಾಮಗಾರಿಗೆ ನಗರಸಭೆಯ ಮೂಲಕ ಅನುದಾನ ಒದಗಿಸಲಾಗಿದೆ. ಅದರಂತೆಯೇ ನಗರಸಭಾ ವ್ಯಾಪ್ತಿಯ ಎಲ್ಲ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಉಡುಪಿ ನಗರಸಭಾ ವ್ಯಾಪ್ತಿಯ ಮಲ್ಪೆ ಸಮೀಪದ ಕೊಳ ವಾರ್ಡ್​ನಲ್ಲಿ ನಗರಸಭೆಯ 25 ಲಕ್ಷ ರೂ. ಅನುದಾನದಲ್ಲಿ ನಿಮಾರ್ಣಗೊಳ್ಳಲಿರುವ ಶ್ರೀರಾಮ 1ನೇ ಅಡ್ಡ ರಸ್ತೆಯ ಕಾಂಕ್ರೀಟ್​ ಕಾಮಗಾರಿಗೆ ಜುಲೈ 12ರಂದು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ವಾರ್ಡ್​ ಸದಸ್ಯೆ ಎಡ್ಲಿನ್​ ಕರ್ಕಡ, ಬಾಲಕರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸತೀಶ, ಸ್ಥಳೀಯ ಪ್ರಮುಖರಾದ ಪಾಂಡುರಂಗ ಮಲ್ಪೆ, ಮಂಜು ಕೊಳ, ರವಿ ಸಾಲ್ಯಾನ್​, ಯಶವಂತ, ಶರತ್​, ಶಂಕರ ಸುವರ್ಣ, ದಿನೇಶ ಕೊಳ, ದೇವದಾಸ ಸುವರ್ಣ, ಸುಮಂತ ಕೊಳ ಇತರರು ಇದ್ದರು.