ಜಿಲ್ಲೆ

ಪುಟಾಣಿಗಳಿಗೆ ಲಭಿಸಲಿ ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

ನೇಜಾರಿನಲ್ಲಿ ಅಂಗನವಾಡಿ ಕೇಂದ್ರಕ್ಕೆ ಶಿಲಾನ್ಯಾಸ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಅಡಿಪಾಯವಾಗಿರುವ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು. ಆ ನಿಟ್ಟಿನಲ್ಲಿ ನೇಜಾರು ಪರಿಸರದಲ್ಲಿ ಅಂಗನವಾಡಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಈ ಭಾಗದ ಪುಟಾಣಿಗಳಿಗೆ ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ ಲಭಿಸಲಿ. ಮಕ್ಕಳ ಆರೋಗ್ಯವಂತ ಬೆಳವಣಿಗೆಗೆ ಪೂರಕ ಸೌಲಭ್ಯ ದೊರೆಯುವಂತಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.

ಉಡುಪಿ ತಾಲೂಕಿನ ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯ ನೇಜಾರು ಕ್ರೀಡಾಂಗಣದ ಬಳಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ನಾಗರಾಜ್​, ಉಪಾಧ್ಯಕ್ಷೆ ಪ್ರೇಮಲತಾ, ಮಾಜಿ ಅಧ್ಯಕ್ಷರಾದ ಸತೀಶ ನಾಯ್ಕ, ಕೃಷ್ಣ ದೇವಾಡಿಗ, ಸದಸ್ಯರಾದ ವಿಶು ಕುಮಾರ್​, ಉದಯ ಪೂಜಾರಿ, ಪ್ರಶಾಂತ ಆಚಾರ್ಯ, ನವೀನ ಕಾಂಚನ್​, ಕವಿತಾ ಮೇಸ್ತ, ರತ್ನಾ, ಅನಿತಾ ನಾಯ್ಕ, ಜ್ಯೋತಿ ಬೆರೆಟ್ಟೋ, ಬೆನೆಡಿಕ್ಟ್​ ಜೆ. ಮೆನೇಜಸ್​, ಪಕ್ಷದ ಪ್ರಮುಖರಾದ ಉಮೇಶ ಅಮೀನ್​, ಸುಧೀರ್​, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯರು ಉಪಸ್ಥಿತರಿದ್ದರು.