ಜಿಲ್ಲೆ

ಬಂಕೇರಕಟ್ಟ ಸೇತುವೆ ಹೂಳು ತೆರವು

ಗೋಪಾಲಕೃಷ್ಣ ಪಾದೂರ್

ಉಡುಪಿ: ಅಂಬಲಪಾಡಿ ಹಾಗೂ ಕಲ್ಮಾಡಿ ನಗರಸಭಾ ವ್ಯಾಪ್ತಿಯ ಗಡಿಭಾಗದಲ್ಲಿರುವ ಬಂಕೇರಕಟ್ಟ ಸೇತುವೆಯ ಕೆಳಭಾಗದಲ್ಲಿ ಹೂಳು ತುಂಬಿದ್ದು, ನೀರು ಸರಾಗ ಹರಿಯಲು ಅಡ್ಡಿಯಾಗಿತ್ತು. ಭಾನುವಾರ ಶಾಸಕ ಯಶ್​ ಪಾಲ್​ ಸುವರ್ಣ ನೇತೃತ್ವದಲ್ಲಿ ಸ್ಥಳಿಯ ಬಿಜೆಪಿ ಕಾರ್ಯಕರ್ತರು ಹೂಳು, ಕಸ ಕಡ್ಡಿಗಳನ್ನು ತೆರವುಗೊಳಿಸಿದರು.

ಹಲವಾರು ವರ್ಷಗಳಿಂದ ಸೂಕ್ತ ನಿರ್ವಹಣೆಯ ಕೊರತೆಯಿಂದ ಹೂಳನ್ನು ತುಂಬಿದ್ದು, ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಮಾಡಿ ಟಿಪ್ಪರ್​ ವಾಹನದ ಮೂಲಕ ಸ್ಥಳಾಂತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆ ಸದಸ್ಯ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಮ ಪಂಚಾಯಿತಿ ಅಧ್ಯೆ ಸುಜಾತಾ ಯೋಗೀಶ್​, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್​ ಪೂಜಾರಿ, ಹರೀಶ್​ ಪಾಲನ್​, ಪಕ್ಷದ ಪ್ರಮುಖರಾದ ಪ್ರವಿಣ್​ ಶೆಟ್ಟಿ ಕಪ್ಪೆಟ್ಟು, ಭುವನೇಂದ್ರ, ಜಗದೀಶ್​ ಕೋಟ್ಯಾನ್​, ವಿವೇಕ್​ ಕಲ್ಮಾಡಿ, ಗಿರೀಶ್​ ಅಮೀನ್​, ರಾಮ್​ ರಾಜ್​ ಕಿದಿಯೂರು, ಸದಾನಂದ ಜಿ ಕಾಂಚನ್​, ಪಾಂಡು, ಸುಧಾಕರ್​ ಪೂಜಾರಿ, ನವೀನ್​ ಸುವರ್ಣ, ಶಿವಾಜಿ ಸನಿಲ್​, ವಿನಯ್​ ಕಲ್ಮಾಡಿ, ಮಂಜು ಕೊಳ, ವಿಜಯ ಕುಂದರ್​, ನವೀನ್​ ಕಿದಿಯೂರು, ಸದಾನಂದ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಜನತೆಯ ಬೇಡಿಕೆಯಂತೆ ಉದ್ಯಾವರದಿಂದ ಮಲ್ಪೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಂಕೇರಕಟ್ಟ ಸೇತುವೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯ ಮೂಲಕ 5 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಯಶ್​ಪಾಲ್​ ಸುವರ್ಣ, ಶಾಸಕ