ಗೋಕರ್ಣ: ಇಲ್ಲಿನ ಸಾಣೆಕಟ್ಟೆಯಲ್ಲಿನ ಮುಖ್ಯ ರಸ್ತೆಯ ಬದಿಯಲ್ಲಿ ಉಂಟಾಗಿರುವ ಗುಡ್ಡ ಕುಸಿತ ಸ್ಥಳವನ್ನು ಶಾಸಕ ದಿನಕರ ಶೆಟ್ಟಿ ಇತ್ತೀಚೆಗೆ ವೀಕ್ಷಿಸಿದರು.
ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದ ಮಣ್ಣು ಕುಸಿದು ಬಂಡೆಗಳು ರಸ್ತೆಯ ಸಮೀಪ ಬಿದ್ದು ಆತಂಕಕ್ಕೆ ಕಾರಣವಾಗಿದೆ. ಗುಡ್ಡದ ಮೇಲೆ ಹಲವು ಮರಗಳಿದ್ದು, ಧರೆ ಕುಸಿತ ಮುಂದುವರಿದು ಅವುಗಳು ಉರುಳಿ ಬಿದ್ದಲ್ಲಿ ಮುಖ್ಯ ರಸ್ತೆಯ ಮೇಲಿನ ಜನ ಮತ್ತು ವಾಹನ ಸಂಚಾರಗಳಿಗೆ ಅಪಾಯ ತರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಶಾಸಕ ದಿನಕರ ಶೆಟ್ಟಿ ಕುಸಿತ ಸ್ಥಳದ ವೀಕ್ಷಣೆ ಮಾಡಿದರು.
ಈ ಬಗ್ಗೆ ಕುಮಟಾ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಜತೆ ರ್ಚಚಿಸಿ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸಂಭಾವ್ಯ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು.
ಬಿಜೆಪಿ ಪ್ರಮುಖ ಎಂ.ಜಿ. ಭಟ್ಟ, ಬಿಜೆಪಿ ತಾಲೂಕು ಪ್ರ.ಕಾರ್ಯದರ್ಶಿ ಗಣೇಶ ಪಂಡಿತ ತದಡಿ, ಮೀನುಗಾರ ಪ್ರಮುಖ ಈಶ್ವರ ಮೂಡಂಗಿ, ಶ್ರೀಕೇತಕಿ ವಿನಾಯಕ, ರೈತ ಸಂಘದ ಹುಲಿಯಾ ಗೌಡ ಮತ್ತಿತರಿದ್ದರು.