ಗಜೇಂದ್ರಗಡ: ಪಟ್ಟಣದಲ್ಲಿ ಬೀದಿ ನಾಯಿಗಳ ಕಚ್ಚಿದ್ದರಿಂದ ಮೃತಪಟ್ಟ ಪ್ರೇಮಾ ಚೋಳಿನ ಅವರ ಮನೆಗೆ ಶಾಸಕ ಜಿ.ಎಸ್. ಪಾಟೀಲ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪುರಸಭೆ ವತಿಯಿಂದ 3 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳನ್ನು ಆದಷ್ಟು ಶೀಘ್ರವಾಗಿ ಮುಟ್ಟಿಸುವ ಕಾರ್ಯ ಮಾಡುತ್ತೇನೆ ಎಂದರು. ಅಲ್ಲದೆ, ವೈಯಕ್ತಿಕವಾಗಿ ಪ್ರೇಮಾ ಕುಟುಂಬಕ್ಕೆ 50 ಸಾವಿರ ರೂ. ಹಾಗೂ ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಮುರ್ತಜಾ ಡಾಲಾಯತ, ಸಿದ್ದಣ್ಣ ಬಂಡಿ, ಸಿದ್ದಪ್ಪ ಚೋಳಿನ, ಅರಿಹಂತ ಬಾಗಮಾರ, ಸುರೇಶ ಚವಡಿ, ಇತರರಿದ್ದರು.