ಚಾಮರಾಜನಗರ: ನಗರದಲ್ಲಿ ನಿತಂತರ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೂಚಿಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಇರುವ ಉದ್ಯಾನವನಕ್ಕೆ ಭಾನುವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ, ನಗರಸಭಾ ಅಧಿಕಾರಿಗಳ ಜತೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಶ್ರೀಚಾಮರಾಜೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ನೈರ್ಮಲ್ಯ ಕಪಾಡಿಕೊಳ್ಳಬೇಕು. ಉದ್ಯಾನವನಕ್ಕೆ ದೀಪ ಅಳವಡಿಸಿ,ತುಕ್ಕು ಹಿಡಿದಿರುವ ಡ್ರಿಲ್ ಗಳಿಗೆ ಬಣ್ಣ ಲೇಪಿಸಬೇಕು.
ಡೀವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಡಿಸಿ ಕಚೇರಿ ಮುಂಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬಳಿಕ ಹೌಸಿಂಗ್ ಬೋರ್ಡ್‌ನಲ್ಲಿರುವ ಸಾರ್ವಜನಿಕ ಉದ್ಯಾನವನದ ಸ್ವಚ್ಛತೆ ಪರಿಶೀಲಿಸಿ, ಹಾಳಾಗಿರುವ ಕುಳಿತುಕೊಳ್ಳುವ ಚಪ್ಪಡಿ ಕಲ್ಲು ದುರಸ್ತಿಗೊಳಿಸಬೇಕು, ಡ್ರಿಲ್‌ಗಳಿಗೆ ಬಣ್ಣ ಬಳಿಯಬೇಕು, ಗಿಡಗಳನ್ನು ಪೋಷಿಸಿ ಪರಿಸರ ಸಂರಕ್ಷಿಸಬೇಕು,ರಸ್ತೆ, ಚರಂಡಿಗಳಲ್ಲಿ ಮಳೆ ನೀರು ನಿಲ್ಲದೆ ಸರಾಗವಾಗಿ ಹೋಗುವಂತೆೆ ತುರ್ತು ಕ್ರಮವಹಿಸಬೇಕು ಎಂದರು.
ನಗರಸಭಾ ಆಯುಕ್ತ ರಾಮದಾಸ್, ಹಿರಿಯ ಆರೋಗ್ಯಧಿಕಾರಿ ಮಂಜು, ಶ್ರೀವಾಸ್‌ಗೌಡ, ಕೆ,ಎಂ ನಾಗರಾಜು ಹಾಗೂ ಇತರರು ಹಾಜರಿದ್ದರು.