ಪುತ್ತೂರು: ಉಪ್ಪಿನಂಗಡಿ-ಪುತ್ತೂರು ರಸ್ತೆಗೆ ೨೦೨೩-೨೪ನೇ ಸಾಲಿನಲ್ಲಿ ೨೦ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರ್ ಆಗಿದ್ದು, ಬೊಳುವಾರಿನಿಂದ ಪಡೀಲುವರೆಗೆ, ಕೋಡಿಂಬಾಡಿ ಭಾಗದಲ್ಲಿ ಚತುಷ್ಪಥವಾಗುತ್ತದೆ. ಈ ಸಾಲಿನಲ್ಲಿ ಬಿಡುಗಡೆಯಾದ ೧೫ ಕೋಟಿಯಲ್ಲಿ ಉಪ್ಪಿನಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವಲ್ಲಿಗೆ ಬಳಸಿಕೊಳ್ಳಲಾಗುತ್ತದೆ. ೫ ಕೋಟಿಯ ಮೂಲಕ ವಿದ್ಯುತ್ ದೀಪ ಅಳವಡಿಕೆಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ರಸ್ತೆಯ ಬದಿ ನಾಟಿ ಮಾಡಿದ ಗಿಡವನ್ನು ಕೀಳುವವರ ಮಾಹಿತಿ ನೀಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ಕಾಮಗಾರಿಯನ್ನು ವಿವಿಧ ಇಲಾಖೆಯ ಅಽಕಾರಿಗಳ ಜತೆಗೆ ಪರಿಶೀಲನೆ ನಡೆಸಿ ಮಾಧ್ಯಮದ ಜತೆಗೆ ಮಾತನಾಡಿದರು.
ಉಪ್ಪಿನಂಗಡಿ-ಪುತ್ತೂರು ರಸ್ತೆಯನ್ನು ಮಾದರಿ ರಸ್ತೆಯನ್ನಾಗಿಸುವ ಕನಸಿದ್ದು, ಈ ನಿಟ್ಟಿನಲ್ಲಿ ಎರಡು ಬದಿಗೆ ಹಣ್ಣಿನ ಗಿಡಗಳನ್ನು ಹಾಕಲಾಗುವುದು. ಈಗಾಗಲೇ ೨೫೦ ಗಿಡಗಳನ್ನು ರಸ್ತೆ ಬದಿಯಲ್ಲಿ ನಾಟಿ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಳಸಿಕೊಂಡು ಬೇಸಿಗೆಯಲ್ಲಿ ನಾಟಿ ಮಾಡಿದ ಗಿಡಗಳಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅಭಿವೃದ್ಧಿಗೆ ಜನಸಾಮಾನ್ಯರು ಸಹಕಾರ ನೀಡಬೇಕು. ಜನರಿಗೆ ಗಿಡಗಳ ಅಗತ್ಯವಿದ್ದರೆ ಅರಣ್ಯ ಇಲಾಖೆಯ ಮೂಲಕ ವಿತರಿಸಲು ವ್ಯವಸ್ಥೆ ಮಾಡಲಾಗುವುದು. ರಸ್ತೆಯ ಬದಿಯಲ್ಲಿ ನಾಟಿ ಮಾಡಿದ ಗಿಡಗಳನ್ನು ಕಿತ್ತುಕೊಂಡು ಹೋಗುವ ಕೆಲಸ ಮಾಡಬೇಡಿ ಎಂದು ಕೈ ಮುಗಿದು ವಿನಂತಿಸಿದರು.
ಮುಖಂಡರಾದ ಅಬ್ದುಲ್ ರಹಿಮಾನ್ ಯುನಿಕ್, ವಿಕ್ರಂ ರೈ ಕೋಡಿಂಬಾಡಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ಸಾಮಾಜಿಕ ಅರಣ್ಯ ವಲಯ ಅರಣ್ಯಾಽಕಾರಿ ಡಿ. ಕೆ. ವಿದ್ಯಾರಾಣಿ, ಉಪವಲಯ ಅರಣ್ಯಾಽಕಾರಿ ಯಶೋಧರ ಕೆ., ಅರಣ್ಯ ಇಲಾಖೆಯ ವಲಯ ಅರಣ್ಯಾಽಕಾರಿ ಕಿರಣ್, ಲೋಕೋಪಯೋಗಿ ಎಇ ತೌಸಿಫ್, ಎಇಇ ರಾಜಾರಾಂ ಮತ್ತಿತರರು ಉಪಸ್ಥಿತರಿದ್ದರು.